ಮೂಡುಬಿದಿರೆ: ಇಲ್ಲಿನ ಕಾರ್ಮಲ್ ಸ್ಕೂಲ್(ಸಿಬಿಎಸ್ಇ), ನಡೆಸಿದ `ಐಎಸ್ಎ’ ಯೋಜನೆಯನ್ವಯ ವೈವಿದ್ಯತೆಯ ಪ್ರದರ್ಶನದಲ್ಲಿ 272 ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಮಲ್ ಸ್ಕೂಲ್ನ ಜೊತೆ ಕಾರ್ಯದರ್ಶಿ ಭಗಿನಿ ಮರಿಯ ನವೀನಾ ಎ.ಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಇಂತಹ ಪ್ರದರ್ಶನಗಳು ವೇದಿಕೆಯಾಗಿ ಅವರ ಜ್ಞಾನವನ್ನು ವೃದ್ಧಿಸುತ್ತದೆ ಎಂದರು.
18mood Carmel School (3)

18mood Carmel School (2)
ಕಿನ್ಯಾದ ಬ್ರದರ್ ಫೆಲಿಕ್ಸ್, ಬ್ರೆಜಿಲ್ ಭಗಿನಿ ಮೆರೀನಾ ಅಂತಾರಾಷ್ಟ್ರೀಯ ವೀಕ್ಷಕರಾಗಿದ್ದರು. ಶಾಲೆಯ ಪ್ರಾಂಶುಪಾಲೆ ಭಗಿನಿ ಮೆರಿಯಾ ಪ್ರೆಮಿಟಾ ಎ.ಸಿ
ಹೋಲಿ ರೋಸರಿ ಸಂಸ್ಥೆ ಜಂಟಿ ಕಾರ್ಯದರ್ಶಿ ಭಗಿನಿ ಮರಿಯ ಉಷಾ, ಸಂಯೋಜಕಿ ಮಾನಸ ಶ್ರೀನಿವಾಸನ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ತ್ರಿಶಾ ಲೋಬೋ ಸ್ವಾಗತಿಸಿದರು. ಅಯಿಷಾ ಸಾಂಬ್ರ ಕಾರ್ಯಕ್ರಮ ನಿರೂಪಿಸಿದರು. ಲಿನ್ ಕಾರ್ಮಲ್ ಡಿ’ಕೋಸ್ತಾ ವಂದಿಸಿದರು.
ಬ್ರಿಟಿಷ್ ಕೌನ್ಸಿಲ್ ಇಂಟರ್ನ್ಯಾಶನಲ್ ಸ್ಕೂಲ್ ಅಕ್ಟಿವಿಟಿಸ್(ಐಎಸ್ಎ 2015-16) ಯೋಜನೆಯನ್ವಯ ದೇಶ-ವಿದೇಶಗಳ ವೈವಿದ್ಯತೆಯನ್ನು ಒಳಗೊಂಡಿರುವ ಪ್ರದರ್ಶನ ಕಾರ್ಮಲ್ ಸ್ಕೂಲ್ನಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು. ಯುವಜನರಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಅರಿವು ಹಾಗೂ ಬೋಧನೆ-ಕಲಿಕೆಗಳ ಗುಣಮಟ್ಟವನ್ನು ಹೆಚ್ಚಿಸುವುದು ಈ ಯೋಜನೆ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡ ಈ ಪ್ರದರ್ಶನವು ಅಂತಾರಾಷ್ಟ್ರೀಯಮಟ್ಟದ ದರ್ಶನ ಮಾಡಿಸಿತು. ಎಲ್ಕೆಜಿ, ಯುಕೆಜಿ ಮಕ್ಕಳು ವಿವಿಧ `ರಾಷ್ಟ್ರೀಯ ಹೂವು’ಗಳನ್ನು ಪ್ರಸ್ತುತಪಡಿಸಿದರೆ, ಒಂದನೇ ತರಗತಿಯ ಮಕ್ಕಳು ಸಾಕುಪ್ರಾಣಿಗಳ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. 2ನೇ ತರಗತಿಯ ವಿದ್ಯಾರ್ಥಿಗಳು `ಸುಗ್ಗಿ ಹಬ್ಬ’ವನ್ನು ವಿದೇಶಗಳಲ್ಲಿ ಯಾವ ರೀತಿ ಆಚರಿಸುತ್ತಾರೆ ಎಂಬುವುದನ್ನು ಪ್ರಸ್ತುತಪಡಿಸಿದರು. ಮೂರನೇ ತರಗತಿಯ ಮಕ್ಕಳು ಮಳೆಗಾಲದಲ್ಲಿನ ವಿಶೇಷತೆಗಳ ಕುರಿತು ಯೋಜನೆಗಳನ್ನು ಪ್ರದರ್ಶನದಲ್ಲಿಟ್ಟಿದ್ದರು. ನಾಲ್ಕನೇ ಹಾಗೂ 5ನೇ ತರಗತಿ ಮಕ್ಕಳು ವಿವಿಧ ದೇಶಗಳಲ್ಲಿನ ಸಂಚಾರಿ ನಿಯಮಗಳ ಕುರಿತು ಸೂಚನ ಫಲಕ, ಪರಿಕರಗಳ ಮೂಲಕ ವಿವರಿಸಿದರು6ನೇ ಹಾಗೂ 7ನೇ ತರಗತಿಯ ಮಕ್ಕಳು ಪೌಷ್ಠಿಕ ಆಹಾರಗಳನ್ನು ತಯಾರಿಸಿ,ಪ್ರದರ್ಶನದಲ್ಲಿಟ್ಟಿದ್ದರು. 8ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ದೇಶಗಳ ನೃತ್ಯ ಕಲೆಗಳನ್ನು ಅವುಗಳ ಧಿರಿಸು, ಅಭರಣಗಳೊಂದಿಗೆ ಪ್ರಸ್ತುಪಡಿಸಿದರು.

By suddi9

Leave a Reply

Your email address will not be published. Required fields are marked *