ಕೈಕಂಬ: ಸಜಿಪ ಮುನ್ನೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಚಂದ್ರ ಪ್ರಕಾಶ್ ಶೆಟ್ಟಿ ಅವರು ಕರಿಯಂಗಳ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಬಿರುಸಿನ ಮತಪ್ರಚಾರ ನಡೆಸಿದರು. ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಇವರು ಬಿಜೆಪಿಯ ಪ್ರಬಲ ಅಭ್ಯರ್ಥಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತೀವ್ರ ಪೈಪೋಟಿಗೆ ಕಾರಣವಾಗಿರುವ ಈ ಕ್ಷೇತ್ರದಲ್ಲಿ ಯಾರು ವಿಜಯದುಂದುಭಿ ಮೊಳಗಿಸುತ್ತಾರೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು ವಿಪರೀತ ಚುನಾವಣೆಯ ಕಾವು ಸೃಷ್ಟಿಸಿದೆ.

Chandraprakash shetty thumbe

1

2 ಸಚಿವ ರಮಾನಾಥ ರೈ ಅವರ ಆಪ್ತರಾಗಿ ಹಲಾವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ   ಸಕ್ರೀಯ ಕಾರ್ಯಕರ್ತರಾಗಿದ್ದು  ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ  ಹಲವು ಅಭಿವ್ರದ್ಧಿಗಳನ್ನು ಮಾಡಿ ಜನರ ಮೆಚ್ಚುಗೆಗಳಿಸಿರುತ್ತಾರೆ.  ಚಂದ್ರಪ್ರಕಾಶ್ ಶೆಟ್ಟಿಯವರನ್ನು ಜಿಲ್ಲಾ ಪಂಚಾಯತ್ ಅಭ್ಯರ್ಥಿ ಎಂದು ಘೋಷನೆ ಮಾಡಿದಾಗ  ಇವರ ಎದುರಿನ ಪ್ರಬಲ ಅಭ್ಯರ್ಥಿಯಾರನ್ನು ಕಣಕಿಳಿಸಿಸಲು ಸಂಘಪರಿವಾರದ ಪಾರ್ಟಿ ಬಿಜೆಪಿಯವರಿಗೆ  ಯಾರನ್ನು ಅಭ್ಯರ್ಥಿ ಎಂದು ಘೋಷನೆ ಮಾಡುವುದು ಸಂಘಪರಿವಾರದ ಗರಡಿಮನೆಯಿಂದ ಪಳಗಿರುವ ಹಾಗೂ ಈ ಹಿಂದೆ ಶಾಸಕರಾಗಿರುವ ಪದ್ಮನಾಭ ಕೊಟ್ಟಾರಿಯವರ ಯವರನ್ನು ಕಣಕಿಳಿಸಿಲು ತಿರ್ಮಾನಿಸಲಾಯಿತು.ಇತ್ತಂಡಗಳ ನಡುವೆಯೂ ಜಿದ್ದಾಜಿದ್ದಿನ ಮತಪ್ರಚಾರ ನಡೆಯುತ್ತಿದ್ದು, ಇದಕ್ಕೆ ಪೂಕರವೆಂಬಂತೆ ಕಳೆದ ಹಲವಾರು ದಿನಗಳಿಂದ ಗೆಲ್ಲಲೇಬೇಕೆಂಬ ನಿರೀಕ್ಷೆಯಲ್ಲಿ ಚಂದ್ರ ಪ್ರಕಾಶ್ ಶೆಟ್ಟಿಯವರು ತನ್ನ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮತಪ್ರಚಾರ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *