ಕೈಕಂಬ: ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನ ಮೂಳೂರು ಇಲ್ಲಿಯ ವಾರ್ಷಿಕ ಬಂಡಿ ಜಾತ್ರೆಯು ಫೆ.14 ರಂದು ಭಾನುವಾರ ಪ್ರಾತಾಕಾಲ ಭಂಡಾರ ಹೊರಡುವುದು ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ಬೆಳಗ್ಗೆ 11. ರಿಂದ ಮಧ್ಯಾಹ್ನ 1. ಗಂಟೆಯವರೆಗೆ ಕಂಚಿಲು ಸೇವೆ ಮತ್ತು ಉರುಳು ಸೇವೆ ರಾತ್ರಿ 8.ಗಂಟೆಗೆ ಶ್ರೀ ಮೈಸಂದಾಯ ದೈವದ ನೇಮ ರಾತ್ರಿ 10. ರಿಂದ ಶ್ರೀ ಮುಂಡಿತ್ತಾಯ ದೈವದ ನೇಮ ,ಬಂಡಿ ರಥೋತ್ಸವ ಪ್ರಸಾದ ವಿತರಣೆ ನಡೆಯಿತು.

ಫೆ.15 ರಂದು ಸೋಮವಾರ ರಾತ್ರಿ 10. ರಿಂದ ಶ್ರೀ ಧೂಮಾವತಿ ,ಬಂಟ ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಿತು.
ಫೆ.16ಮಂಗಳವಾರ ರಾತ್ರಿ 7.ಗಂಟೆಗೆ ತುಡರ ಬಲಿ ಉತ್ಸವ ,ಧ್ವಜಾವರೋಹಣ,ಭಂಡಾರ ನಿರ್ಗಮನ 14ರಂದು ಭಾನುವಾರ ಮಧ್ಯಾಹ್ನ 1.ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರಗಲಿದೆ.





