ಮಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ರವರ ಬಂಧನವನ್ನು ವಿರೋಧಿಸಿ, ಬಿಜೆಪಿ ಮಂಗಳೂರು ನಗರ ದಕ್ಷಿಣದ ವತಿಯಿಂದ 14.02.2016 ಭಾನುವಾರ ಮಧ್ಯಾಹ್ನ 12.00ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಎದುರು ಕಾಂಗ್ರೆಸ್ ರಾಜ್ಯ ಸರಕಾರದ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಂಡಲ ಅಧ್ಯಕ್ಷ ರವಿಶಂಕರ್ ಮಿಜಾರ್ ಹಾಗೂ ಜಿಲ್ಲಾ ಸಮಿತಿ ಸದಸ್ಯ ಪುರುಷೋತ್ತಮ ಭಟ್ ಮಾತನಾಡಿದರು. ಸಭೆಯಲ್ಲಿ ಮ.ನ.ಪಾ.ಸದಸ್ಯರಾದ ರಾಜೇಂದ್ರ ಕುಮಾರ್, ನವೀನ್ ಚಂದ್ರ, ಜಯಂತಿ ಆಚಾರ್, ರೂಪಾ ಡಿ.ಬಂಗೇರಾ, ಜಿಲ್ಲಾ ಸಮಿತಿ ಸದಸ್ಯರಾದ ನಾರಾಯಣ ಗಟ್ಟಿ, ಬಿಜೆಪಿ ವಾರ್ಡ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಹಾಗೂ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

