ಸುರತ್ಕಲ್: ಬಾಳಿಕೆ ಶ್ರೀ ಕೋಡ್ದಬ್ಬು ದೈವಸ್ಥಾನ ಸುರತ್ಕಲ್ ಇದರ ಪುನಃಪ್ರತಿಷ್ಠೆ ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇತ್ತೀಚೆಗೆ ದೈವಸ್ಥಾನದ ವಠಾರದಲ್ಲಿ ಜರಗಿತು.ಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು. ಕಲಶಾಭಿಷೇಕದಂದು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯ ಕ್ರಮಗಳು ಜರಗಲಿವೆ. ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ಪ್ರಭಾಕರಶೆಟ್ಟಿ ಮುದ್ದರಮನೆ, ವಿಶ್ವನಾಥ ಶೆಟ್ಟಿ ಬಾಳಿಕೆಮನೆ, ಮಾಜಿ ಮೇಯರ್ ರಜನಿದುಗ್ಗಣ್ಣ, ಮಹೇಶ್ ಮೂರ್ತಿ, ಕಾರ್ಯಾಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕೇಶವ ಪೂಜಾರಿ ಚೊಕ್ಕಬೆಟ್ಟು ಉಪಸ್ಥಿತರಿದ್ದರು. ಅಶೋಕ್ ಶೆಟ್ಟಿ ತಡಂಬೈಲ್ ಸ್ವಾಗತಿಸಿದರು. ರತ್ನಾಕರ ಶೆಟ್ಟಿ ಮುದ್ದರಮನೆ ವಂದಿಸಿದರು.

