ಮೂಡುಬಿದಿರೆ : ಹಿದಾಯ ಮೆಸ್ಕೊ ಅರೆಬಿಕ್ ಅಕಾಡೆಮಿ ಮಂಗಳೂರು ಆಯೋಜಿಸಿದ ಅವಿಭಜಿತ ದ.ಕ ಜಿಲ್ಲಾಮಟ್ಟದಪ್ರೌಢಶಾಲಾ ಇಸ್ಲಾಮಿಕ್ ಮೊಡ್ಯುಲ್ ಸ್ಪರ್ದೆಯಲ್ಲಿ ಮೂಡುಬಿದಿರೆ-ಅಲ್ ಫುರ್ಖಾನ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ತಂಡ ಪ್ರಥಮ ಸ್ಥಾನಿಯಾಗಿದೆ.

ವಿದ್ಯಾರ್ಥಿಗಳಾದ ಮೊಹಮ್ಮದ್ ಅಜಾಝ್, ರವಾಹ ಮುನೀರ್ ಹಾಗೂ ಸಲಾಹುದ್ದೀನ್ ಖಾನ್ ರವರು ದುಂದುವೆಚ್ಚ ಎಂಬ ವಿಷಯವನ್ನಾಧರಿಸಿ ರಚಿಸಿ ಪ್ರಸ್ತುತ ಪಡಿಸಿದ ಮೊಡ್ಯುಲ್ ನಗದು ಪುರಸ್ಕರದೊಂದಿಗೆ ಬಹುಮಾನ ಪಡೆದುಕೊಂಡಿದೆ.
ಅರೇಬಿಕ್ ಭಾಷೆ ಮತ್ತು ಇಸ್ಲಾಮೀ ಜ್ಞಾನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಡೆಸಿದ ಈ ಸ್ಪರ್ಧೆಯಲ್ಲಿ ಸುಮಾರು 39 ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳನ್ನು ಅಲ್ ಫುಖ್ರಾನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮೊದಿನ್ ಕುಂಞ ಹಾಗೂ ಸಂಸ್ಥೆಯ ನಿರ್ದೇಶಕ ಮುಮ್ತಾಝ್ ಪ್ರೋತ್ಸಾಹಿಸಿದ್ದಾರೆ.
