ಮೂಡಬಿದರೆ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರ(ರಿ) ಮೊಗರು, ಕುಕ್ಕಟೆ ಇದರ ನೂತನ ಕಟ್ಟಡ ನಿಮಾಣದ ಬಗ್ಗೆ ನಿರ್ಮಾಣ ಸಮಿತಿಯನ್ನು ಮೊಗರು ಶಾಲೆಯಲ್ಲಿ ಮೊಗರು ಗ್ರಾಮಸ್ಥರು ಸಭೆಯಲ್ಲಿ ರಚಿಸಲಾಯಿತು. ಮಂಡಳಿ ಅಧ್ಯಕ್ಷ ಹರಿಚ್ಚಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದದ್ದರು.
ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾಗಿ ಅಣ್ಣಯ್ಯ ಎಂ,ಅಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ವಿದ್ಯಾಚರಣ್ ಭಂಡಾರಿ, ಕಾರ್ಯದರ್ಶಿಯಾಗಿ ಸಂದೇಶ್, ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ, ಕೋಶಾಧಿಕಾರಿಯಾಗಿ ಜಯಾನಂದ ನಾಯ್ಕ್, ಜೊತೆ ಕೋಶಾಧಿಕಾರಿಯಾಗಿ ಮಾಧವ ಎಂ, ಸಂಘಟನಾ ಕಾರ್ಯದರ್ಶಿಗಳಾಗಿ ದೀಪಕ್ ಶೆಟ್ಟಿ, ನವೀನ್, ಪುನೀತ್ ಮತ್ತು 25 ಮಂದಿ ಉಪಾಧ್ಯಕ್ಷರುಗಳನ್ನು ಹಾಗೂ 15 ಮಂದಿ ಸಲಹಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸುಬ್ರಾಯಭಟ್ ಪ್ರಾರ್ಥಿಸಿ, ಅಣ್ಣಯ್ಯ ಎಂ, ಪ್ರಸ್ತಾವನೆ ಗೈದರು. ಮಹೇಶ್‍ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
