ಬಂಟ್ವಾಳ: ಜೆಸಿಐ ವಿಟ್ಲ ಇದರ ವತಿಯಿಂದ ವಿಟ್ಲ ಸೈಂಟ್ ರೀಟಾ ಇಂಗ್ಲಿಷ್ ಮೀಡಿಯಂ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಹಾಗೂ ಪೋಷಕರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರದ ಬಗ್ಗೆ ತರಬೇತಿ ಶಿಬಿರವು ಸೈಂಟ್ ರೀಟಾ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆಯ ಜತೆಕಾರ್ಯದರ್ಶಿ ಫಾ| ಎರಿಕ್ ಕ್ರಾಸ್ತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆಸಿಐ ಅಧ್ಯಕ್ಷ ಬಾಬು ಕೆ ವಿ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ನಿಕಟ ಪೂರ್ವ ಅಧ್ಯಕ್ಷ ತರಬೇತಿ ವಿಭಾಗದ ನಿರ್ದೇಶಕ ಮೋಹನ ಮೈರ, ಸಂಪನ್ಮೂಲ ವ್ಯಕ್ತಿ ಸತೀಶ್ ಭಟ್ ಬಿಳಿನೆಲೆ, ಸೈಂಟ್ ರೀಟಾ ಪ್ರಾಥಮಿಕ ಶಾಲಾ ಮುಖ್ಯ ಸಿಕ್ಷಕಿ ಸಿಸ್ಟರ್ ಮರೀನ ಲಸ್ರಾದೊ ಭಾಗವಹಿಸಿದ್ದರು. ಶಿಕ್ಷಕಿ ಹೆಲೆನ್ ಲಸ್ರಾದೋ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಸಚಿನ್ ಪ್ರಸ್ತಾವಿಸಿದರು. ಶಿಕ್ಷಕಿ ವಿಲ್ಮಾ ವಂದಿಸಿದರು. ಶಿಕ್ಷಕಿ ಸಂದ್ಯಾ ಯಂ ಡಿ ನಿರೂಪಿಸಿದರು. ಹತ್ತನೇ ತರಗತಿಯ 58 ವಿದ್ಯಾರ್ಥಿಗಳು, ಪೋಷಕರು, ಜೇಸಿಐ ಪೂರ್ವಾಧ್ಯಕ್ಷರಾದ ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
