ಎಂಟು ಪ್ರತ್ಯೇಕ ಪ್ರಕರಣ, 380ಗ್ರಾಂ ಚಿನ್ನ ನಗದು, ವಿದೇಶಿ ಕರೆನ್ಸಿಗಳು ಒಟ್ಟು ಮೌಲ್ಯ 11.5ಲಕ್ಷ
ಬಜಪೆ ಪೋಲೀಸ್ ಠಾಣೆ ವ್ಯಾಪ್ತಿಯ ಸುಮಾರು ಹತ್ತು ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ ಕುಖ್ಯಾತ ಕಳ್ಳನೊಬ್ಬನನ್ನು ಸೋಮವಾರ ನಡೆಸಿದ ಯಶಸ್ವಿ ಕಾರ್ಯಚರಣೆಯಲ್ಲಿ ಬಜಪೆ ಪೊಲೀಸರು ಬಂದಿಸಿ ಆತನಿಂದ ಚಿನ್ನ, ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಜಪೆ ಜರಿನಗರದ ನಿವಾಸಿ ಅಬ್ದುಲ್ ರಝಾಕ್(45) ಎಂಬತನೇ ಬಂಧಿತನಾಗಿದ್ದು ಆತನಿಂದ ಹಲವಾರು ಪ್ರಕರಣಗಳಿಗೆ ಸಂಬಂದಿಸಿ 380ಗ್ರಾಂ ಚಿನ್ನ, ರೂ.30ಸಾವಿರ ನಗದು, 68ಸಾವಿರ ಮೌಲ್ಯದ ವಿದೇಶಿ ಕರೆನ್ಸಿ ಒಂದು ಬೈಕ್ ಸೇರಿದಂತೆ ಒಟ್ಟಾರೆ 11.36 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಗಳು:
* 31-10-2014 ಸಂಜೆ 5.30ರಿಂದ 7.30ರ ಮಧ್ಯೆ ಬಜಪೆ ಮುರ ನಗರದ ವಿನ್ಸೆಂಟ್ ಪಿಂಟೋ ಎಂಬವರ ಮನೆಯ ಮುಂದಿನ ಬಾಗಿಲ ಚಿಲಕ ಮುರಿದು ಒಳನುಗ್ಗಿ ಚಿನ್ನಾಭರಣ ನಗದು ಲೂಟಿ .
* 23-4-2015 ರಾತ್ರಿ ಕಂದಾವರ ಗುರುಕುಮೇರು ಪೂರ್ಣಿಮಾ ಎಂಬವರ ಮನೆಯ ಹಿಂಬಾಗಿಲ ಚಿಲಕವನ್ನು ಕಿಟಕಿಯ ಮೂಲಕ ಉದ್ದದ ಕೋಲು ಬಳಸಿ ತೆರೆದು ಚಿನ್ನಾಭರಣ ನಗದು ಕಳವು.
* 19-9-2015 ಹಾಡುಹಾಗಲೇ ಗಂಜಿಮಠ ಮಾರ್ಗರೇಟ್ ಎಂಬವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ನಗದು ಕಳವು.
* 12-122015 ರಾತ್ರಿ ಸುಂಕದಕಟ್ಟೆಯ ಸಿರಿಲ್ ವಿನ್ಸೆಂಟಾ ಪಿಂಟೋ ಅವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ನಗದು ಲೂಟಿ. ಮನೆಯವರು ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ ಖಚಿತ ಪಡಿಸಿ ಕಿಟಕಿಯ ಮೂಲಕ ಉದ್ದನೇಯ ಕೋಲಿನಿಂದ ಚಿಲಕ ಮುರಿದು ಕಳವು ಮಾಡಲಾಗಿದೆ.
* 31-12-2015 ರಾತ್ರಿ ಕಂದಾವರ ಪಂಚಾಯತ್ ರಸ್ತೆ ಬಳಿ ತೋಮಸ್ ಜಾನ್ ತಾಪ್ರೋ ಮನೆಮಂದಿ ಚರ್ಚ್‍ಗೆ ಹೋಗಿದ್ದನ್ನು ಖಚಿತಪಡಿಸಿ ಅಡಿಗೆ ಕೊಣೆಯ ವೆಂಟಿಲೇಟರ್ ಮೂಲಕ ಒಳನುಗ್ಗಿ ವಿದೇಶಿ ಕರೆನ್ಸಿ ಹಾಗೂ ನಗದು ಲೂಟಿ.
* 19-10-2014: ಬಜಪೆ ಮೋರ್ನಿಂಗ್ ಸ್ಟಾರ್ ಶಾಲೆ ಬಳಿ ವಾೈಲೆಟ್ ಸಲ್ಡಾನ ಎಂಬವರ ಮನೆಯ ಕಿಟಕಿ ಮೂಲಕವೇ ಚಿನ್ನಾಭರಣ ಬಾಕ್ಸನ್ನು ಉದ್ದದ ಕೋಲಿನಿಂದ ವಿಗರಿಸಿ ಯಾವಿದೇ ಚಿಲಕ ಬಾಗಿಲು ಮುರಿಯದೇ ಜಾಣತನದಿಂದ ಕಳವು ಮಾಡಲಾಗಿದೆ.
ಕ್ರಿಶ್ಚಿಯನ್ ಮನೆಗಳೇ ಈತನ ಟಾರ್ಗೆಟ್:
ಅಬ್ದುಲ್ ರಝಾಕ್ ಕಳವುಗೈದ ಮನೆಗಳೆಲ್ಲವು ಕ್ರಿಶ್ಚಿಯನ್ ಮನೆಗಳೇ ಆಗಿರುವುದು ವಿಶೇಷ. ಇದಕ್ಕೂ ನಿರ್ದಿಷ್ಟ ಕಾರಣಗಳಿವೆ ಎನ್ನಲಾಗಿದೆ. ಚರ್ಚ್‍ಗೆ ಹೋಗಿದ್ದ ಸಮಯ, ರೋಸ್(ಮೆಹಂದಿ) ಮದುವೆ ಇತ್ಯಾದಿ ಸಮಾರಂಭಗಳ ವೇಳೆ ಮನೆಗಳಲ್ಲಿ ಚಿನ್ನಾಭರಣ ನಗದು ಎರುವುದನ್ನು ಹಾಗೂ ಮುಂಬೈ ವಿದೇಶಗಳಿಂದ ಬರುವವರನ್ನು ಸೂಕ್ಷ್ಮವಾಗಿ ಗಮನಿಸಿ ಈತ ಕಳವಿಗೆ ಸ್ಕೆಚ್ ಹಾಕಿತ್ತಿದ್ದಾನೆಂದು ಅಬ್ದುಲ್ ರಝಾಕ್ ಪೋಲಿಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.


ಹೆಚ್ಚುವರಿ ಪ್ರಕರಣಗಳು:
ಎಂಟು ಪ್ರಮುಖ ಪ್ರಕರಣಗಳಲ್ಲದೆ
*ಸುಂಕದಕಟ್ಟೆ ಜಿಲ್ಲಿ ಫೆರ್ನಾಂಡಿಸ್ ಮನೆಯಿಂದ ಸ್ವಲ್ಪ ಪ್ರಮಾಣದ ನಗದು
* ಬಜಪೆ ಚರ್ಚ್ ಬಳಿ ಜಾನ್ ಪಿರೇರಾ ಮನೆಯಿಂದ ಕಳವು
*ಬಜಪೆ ಕಿನ್ನಿಪದವು ಹಳೆ ಪೆಟ್ರೋಲ್ ಪಂಪ್ ಬಳಿ ಮನೆಯಿಂದ 11ಕೆ.ಜಿ. ಕರಿಮೆಣಸು.
*ಕೈಕಂಬ-ಕಂದಾವರ ವಿಲ್ಫ್ರೆಡ್ ಪಿಂಟೋ ಮನೆಯಿಂದ ನಗದು
* ಬಜಪೆ ಮೊರ್ನಿಂಗ್ ಸ್ಟಾರ್ ಶಾಲೆ ಬಳಿ ಕ್ಲಾರಿಸ್ ಡಿಸೋಜಾ ಮನೆಯಿಂದ ನಗದು ಕಳವು.
ಈ ಹಿಂದೆ ಮುಲ್ಕಿ ಪರಿಸರದಲ್ಲಿ ಈತ ಹಳವು ಕಳವು ಪ್ರಕರಣ ಅರೋಪಿಯಾಗಿದ್ದು ಅವೆಲ್ಲವೂ ಕ್ರಿಶ್ಚಿಯನ್ ಮನೆಗಳೇ ಆಗಿವೆ ಅನ್ನುವುದು ವಿಶೇಷ.
10 ಸಾವಿರ ರೂ. ಬಾಡಿಗೆಯ ಮನೆ
ಅಂದಹಾಗೆ ಅಬ್ದುಲ್ ರಝಾಕ್ ವಾಸವಿರುವಿದು ಬಜಪೆ ಜರಿನಗರದ ಬಾಡಿಗೆ ಮನೆಯಲ್ಲಿ. ಮನೆಯ ಬಾಡಿಗೆ ರೂ.10 ಸಾವಿರ ಲಾಭಕ್ಕಾಗಿ. ಕೊಲೆಪ್ರಕರಣದಲ್ಲೂ ಈತ ಶಾಮೂಲಾಗಿದ್ದಾನೆಂದು ತಿಳಿದು ಬಂದಿದೆ.
ಈ ಕಾರ್ಯಚರಣೆಯನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಶ್ರೀ ಚಂದ್ರಶೇಖರ್ ಎಂ.ಐಪಿಎಸ್‍ರವರ ಮಾರ್ಗದರ್ಶನದಲ್ಲಿ ಡಿಸಿಪಿಯಾವರಾದ ಶ್ರೀ ಕಾಂತರಾಜು ಕೆ.ಎಸ್.ಪಿ.ಎಸ್, ಕಾನೂನು ಮತ್ತು ಸುವ್ಯವಸ್ತೆ, ಡಾ. ಸಂಜೀವ ಪಾಟೀಲ್ ಕೆ.ಎಸ್.ಪಿ.ಎಸ್, ಅಪರಾದ ಮತ್ತು ಸಂಚಾರ ಇವರ ನಿರ್ದೇಶನದಲ್ಲಿ ಮಂಗಳೂರು ಉತ್ತರ
ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಮದನ್ ಎ.ಗಾಂವ್ಕರ್‍ರವರ ಸೂಚನೆಯಂತೆ ಬಜಪೆ ಪೊಲೀಸ್ ನಿರೀಕಕ್ಷರಾದ ಶ್ರೀ ಡಿ.ಟಿ ನಾಗರಾಜ್‍ರವರ ನೇತೃತ್ವದಲ್ಲಿ ಪಿ.ಎಸ್.ಐ ರಮೇಶ್ ಹೆಚ್ ಹನಾಪುರ್, ಎಎಸ್‍ಐ ಸುಗುಮಾರನ್ ಕೆ.ಹೆಚ್.ಸಿಯವರಾದ ಪ್ರಕಾಶ್ ಮೂರ್ತಿ, ರಾಮಚಂದ್ರ, ಚಂದ್ರಶೇಖರ್ ಹಾಗೂ ಸಿಪಿಸಿಯವರಾದ ಜಯಾನಂದ, ಚಂದ್ರಮೋಹನ್, ಭರತ್ ಕೆ.ಜಿ., ಶಶಿಧರ್, ಅಬುಶಾಲ್ಯ, ಮಪಿಸಿ ಶ್ರೀಮತಿ ಲಾವಣಿಯವರನ್ನೊಳಗೊಂಡ ಈ ಕಾರ್ಯಚರಣೆಯನ್ನು ನಡೆಸಿರುತ್ತಾರೆ.
ಪೊಲೀಸ್ ಕಮೀಷನರ್ ಚಂದ್ರಶೇಖರ್ ರಾವ್ ಆಯುಕ್ತರ ಕಚೇರಿಯಲ್ಲಿ
ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.

