ಉತ್ತಮವಾದ ಆರೋಗ್ಯಕ್ಕೆ ಶಿಸ್ತು ಮತ್ತು ಸ್ವಚ್ಛತೆಯೇ ದಿವ್ಯ ಔಷಧಿ-ಡಾ| ಕೆ.ಮೋಹನ್
ಮುಂಬಯಿ: ವಿ.ಪಿ ಎಂನ ಶ್ರೀಮತಿ ಸುಂದರಿಬಾಯಿ ಮಂಜುನಾಥ್ ಕಾಮತ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉತ್ತಮವಾದ ಆರೋಗ್ಯಕ್ಕೆ ಶಿಸ್ತು ಮತ್ತು ಸ್ವಚ್ಛತೆಯೇ ದಿವ್ಯ ಔಷಧಿ-ಡಾ| ಕೆ.ಮೋಹನ್, ಬಡತನದಲ್ಲಿ ಬೆಂದು-ನೊಂದು, ಸೋತು-ಸವೆದು, ಕೊಳಚೆ ಪ್ರದೇಶದಿಂದ ಬರುವ ಕಡು ಬಡವರಿಗೆ ವಿದ್ಯಾ ಪ್ರಸಾರಕ ಮಂಡಳವು ಕಲ್ಪವೃಕ್ಷದಂತೆ. ಆ ಮಕ್ಕಳಿಗೆ ಬಡತನವಿರಬಹುದು ಆದರೆ ಮನಸ್ಸಿಗಲ್ಲ ಎಂಬುದನ್ನು ಅರಿತ ಮಂಡಳವು ಕೆಸರಿನಲ್ಲಿರುವ ಕಮಲವನ್ನು ಆಯ್ಕೆ ಮಾಡಿ ಅದರ ಪರಿಮಳವನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಉದ್ದೇಶವನ್ನಿಟ್ಟುಕೊಂಡು ಶಿಸ್ತಿನ ಸಿಪಾಯಿಗಳನ್ನಾಗಿ ಮಾಡಿ ?ಆರೋಗ್ಯವೇ ಭಾಗ್ಯ? ಸ್ವಚ್ಛತೆಯ ಸುಮಧುರತೆಯನ್ನು ಕಲಿಸಿಕೊಟ್ಟು, ದಿವ್ಯ ಜ್ಞಾನವನ್ನು ಒದಗಿಸಿಕೊಟ್ಟು ಆದರ್ಶ ನಾಗರಿಕರನ್ನಾಗಿ ಪರಿವತರ್ಿಸುವ ಗುರಿಯನ್ನೊಳಗೊಂಡ ವಿದ್ಯಾ ಪ್ರಸಾರಕ ಮಂಡಳದ ಕಾರ್ಯವೈಖರಿ ಅತ್ಯಧ್ಬುತ. ಇದರಲ್ಲಿ ತಮ್ಮ ಕಾರ್ಯ ಕೇವಲ ಅಳಿಲು ಸೇವೆಯೆಂದು, ಅದಕ್ಕೆ ಅವಕಾಶ ಮಾಡಿಕೊಟ್ಟ ಪ್ರಸ್ತುತ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ಚಿತ್ರಾ ಚೌಧರಿಯವರಿಗೆ ನಮನ ಸಲ್ಲಿಸಿದರು. ಮುಲುಂಡ ವಲಯದ ಲಯನ್ಸ್ ಕ್ಲಬ್ನ ಹಾಗೂ ವಿ.ಪಿ.ಎಂನ ಉಪಾಧ್ಯಕ್ಷರು ಹಾಗೂ ಚಿಕ್ಕ ಮಕ್ಕಳ ತಜ್ಞರಾದ ಡಾ| ಕೆ.ಮೋಹನರು ಅಭಿಪ್ರಾಯಪಟ್ಟರು.
ಈ ಶಿಬಿರದ ಮಾರ್ಗದರ್ಶಕರು, ಮಂಡಳದ ಪ್ರಧಾನ ಗೌರವ ಕಾರ್ಯದಶರ್ಿ ಡಾ| ಪಿ.ಎಂ ಕಾಮತ್ರು ಮಂಡಳದ ಸಹಕಾರದಿಂದ ಮತ್ತು ಮಕ್ಕಳ ಮೇಲಿನ ಪ್ರೀತಿ- ಕರುಣೆ, ಮಮತೆ-ವಾತ್ಸಲ್ಯದಿಂದ ಎಡೆಬಿಡದೆ ನಮ್ಮ ಆವ್ಹಾನವನ್ನು ಆಮಂತ್ರಿಸಿ ದಿನಾಂಕ 18, 19, 20 ಮತ್ತು 21 ರವರೆಗೆ ನಿರರ್ಗಳತೆಯಿಂದ ಕೂಲಂಕುಶವಾಗಿ ಬಾಲವಾಡಿಯಿಂದ-ನಾಲ್ಕನೇ ತರಗತಿಯ 175 ಮಕ್ಕಳಿಗೆ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡು ಗಿಣಚಿಟಟಿ-ಂ ಕೊರತೆಯಿರುವ ಹಾಗೂ ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿರುವ, ಕಿವಿ, ನೇತ್ರ, ಹೀಗೆ ದೇಹದ ಸಮಗ್ರ ಸಂಶೋಧನೆಯನ್ನು ಮಾಡಿ ಆ ಸಮಸ್ಯೆಗಳಿಂದ ಮುಕ್ತಗೊಳಿಸಲು ಸಂಬಂಧಪಟ್ಟ ಔಷಧಿ, ಟಾನಿಕ್ಗಳನ್ನು ಕೊಟ್ಟು ಅವರಲ್ಲಿ ಶಕ್ತಿ-ಯುಕ್ತಿ, ಛಲಗಾರಿಕೆಯ ಮನೋವೃತ್ತಿಯನ್ನು ಬೆಳೆಸಿದ್ದಾರೆ ಅದಕ್ಕಾಗಿ ಅವರಿಗೆ ನಾವು ಸದಾ ಚಿರಋಣಿ. `ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸಿರುತ್ತದೆ? ಎನ್ನುವಂತೆ ವಿದ್ಯಾ ಪ್ರಸಾರಕ ಮಂಡಳವ್ಬು ವಿದ್ಯಾಥರ್ಿಗಳಿಗೆ ಕೈ ತೊಳೆಯುವ ಸಲಕರಣೆಗಳನ್ನು ಉಚಿತವಾಗಿ ವಿತರಿಸುತ್ತೇವೆಂದು ಅತ್ಯಂತ ಸಂತೋಷಭರಿತವಾಗಿ ಹೇಳಿದರು. ವಿದ್ಯೆಯ ವಿಕಾಸದಿಂದ ವಂಚಿತರಾಗಬಾರದೆಂದು ಮಂಡಳವು ಉಚಿತ ಶಾಲಾ ಬಸ್ಸಿನ ವ್ಯವಸ್ಥೆ, ಉಚಿತ ಪ್ರವೇಶ, ಉಚಿತ ನೋಟಬುಕ್ ಮತ್ತು ಪಠ್ಯ ಪುಸ್ತಕ ವಿತರಣೆ, ಉಚಿತ ಸಮವಸ್ತ್ರ, ಉಚಿತ ಬ್ಯಾಗ್, ಉಚಿತ ಕಂಪಾಸ್ ಪೆಟ್ಟಿಗೆ, ಉಚಿತ ಸ್ಮಾಟರ್್ಬೊಡರ್್ನ ವ್ಯವಸ್ಥೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸೃಜನಶೀಲ ಶೈಕ್ಷಣಿಕ ಮತ್ತು ದತ್ತಿ ಬಹುಮಾನಗಳ ವಿತರಣೆ, ಉಚಿತ ಬೂಟುಗಳ, ಉಚಿತ ಕೊಡೆಗಳ, ಉಚಿತ ರೇನ್ ಕೋಟ್ ಹೀಗೆ ಎಲ್ಲಾ ರೀತಿಯ ಸಹಾಯವನ್ನು ಮಾಡಿಕೊಂಡು ಬರುತ್ತಿದೆ. ಇದರ ಉಪಯೋಗವನ್ನು ಕನ್ನಡದ ಬಂಧುಗಳು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ವಿನಂತಿಕೊಂಡರು.
ವೇದಿಕೆಯ ಮೇಲೆ ಶ್ರೀಮತಿ ಚಿತ್ರಾ ಚೌಧರಿಯವರು ವಿ.ಪಿ ಎಂ ಕನ್ನಡ ಶಾಲೆಯ ಮಕ್ಕಳಿಗೆ ಎಲ್ಲಾ ರೀತಿಯ ಸಹಾಯ-ಸಹಕಾರ ಮಾಡಲು ಯಾವಾಗಲು ಸದಾ ಸಿಧ್ಧವೆಂದು ಮನದಾಳದಿಂದ ಮಂಡಳಕ್ಕೆ ಭರವಸೆ ಕೊಟ್ಟರು. ಡಾ| ಕೆ.ಮೋಹನ್, ಡಾ| ಪಿ. ಎಂ ಕಾಮತ್, ಪ್ರೋ| ಸಿ.ಜೆ ಪೈ, ಮುಖ್ಯೋಪಾಧ್ಯಾಯಿ ಅರುಣಾ ಭಟ್ ಲಯನ್ಸ್ ಕ್ಲಬ್ನ ಉಪಸ್ಥಿತರಿದ್ದ ಎಲ್ಲಾ ಪದಾಧಿಕಾರಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು.
ಚಿಕಿತ್ಸಾ ಸಮಾರೋಪ ಸಮಾರಂಭವು ವಿದ್ಯಾಥರ್ಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪರಿವೀಕ್ಷಕಿ ಗೌರಿ ದೇಶಪಾಂಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆಗೈದರು. ಶಿಕ್ಷಕಿ ಲಕ್ಷ್ಮೀ ಕೆಂಗನಾಳ ಗಣ್ಯರ ಪರಿಚಯ ಮಾಡಿದರು. ಶಿಕ್ಷಕಿ ರೇಖಾ ರಾವ್ ವಂದಿಸಿದರು.



