ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್‍ನಿಲ್ದಾಣ ಹಿಂಬದಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ದಂಡೆ ಎಸೋಸಿಯೇಟ್ಸ್’ ವಕೀಲರ ಕಚೇರಿಯು ಇಲ್ಲಿನ ಕೃಷ್ಣಿಮಾ ಹೋಟೆಲ್ ಎದುರಿನ ‘ಸರಸ್ವತಿ ಕಾಂಪ್ಲೆಕ್ಸ್’ ಒಂದನೇ ಮಹಡಿ ಸ್ವಂತ ಕಟ್ಟಡಕ್ಕೆ ಜ.29ರಂದು ಬೆಳಿಗ್ಗೆ ಸ್ಥಳಾಂತರಗೊಂಡಿತು.
4btl-Lawyrಬಂಟ್ವಾಳ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಅಶ್ವನಿ ಕುಮಾರ್ ರೈ ಮತ್ತು ನೋಟರಿ ಜಯರಾಮ ರೈ ಇವರು ದೀಪ ಪ್ರಜ್ವಲಿಸಿ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.
ಎಸೋಸಿಯೇಟ್ಸ್ ಮುಖ್ಯಸ್ಥರಾದ ವಕೀಲ ರಾಮಚಂದ್ರ ಶೆಟ್ಟಿ ದಂಡೆ ಮತ್ತು ಚೇತನಾ ಆರ್.ದಂಡೆ ಸಹಿತ ಪ್ರಮುಖರಾದ ನಡ್ವಲಚ್ಚಿಲ್ ನಳಿನಾಕ್ಷಿ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿ ದಂಡೆ, ಮುನ್ನಲಾಯಿಗುತ್ತು ಕಮಲಾಕ್ಷಿ ಮತ್ತು ಮಹಾಬಲ ಶೆಟ್ಟಿ ಶೀನಾಜೆ ವೀರಕಂಭ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *