ಬಂಟ್ವಾಳ: ಫೆ.20ರಂದು ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪರವಾನಿಗೆ ಹೊಂದಿರುವ ಬಂದೂಕುದಾರರು ತಮ್ಮಲ್ಲಿರುವ ಬಂದೂಕು, ಪಿಸ್ತೂಲು ಮತ್ತು ರಿವಾಲ್ವರ್ನ್ನು ಇಲ್ಲಿನ ಅಧಿಕೃತ ಬಂದೂಕು ದಾಸ್ತಾನು ಕಚೇರಿಗೆ ಅಥವಾ ಸ್ಥಳೀಯ ಠಾಣೆಗೆ ಇದೇ 4ರೊಳಗೆ ತಂದು ಠೇವಣಿ ಇಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
