ಬಂಟ್ವಾಳ: ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ, ಮತ್ತು ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ಸೇವೆ ನಡೆಯಿತು. 

