ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಪೀರ್ದೊಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆಯ ಬಾವಿ ನೀರೆಳೆಯುವ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಇಲ್ಲಿನ ಪೀರ್ದೊಟ್ಟು ನಿವಾಸಿ ಮೋನಪ್ಪ ಗೌಡ(45) ಎಂದು ಗುರುತಿಸಲಾಗಿದೆ.28btl-Panjikal

ಕಳೆದ 4 ವರ್ಷಗಳ ಹಿಂದೆಯಷ್ಟೇ ಪುತ್ತೂರಿನ ಅಜಯ ನಗರ ನಿವಾಸಿ ಗೀತಾ ಎಂಬವರನ್ನು ವಿವಾಹವಾಗಿದ್ದ ಮೋನಪ್ಪ ಗೌಡರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇದೆ.
ಮುಂಬೈನ ಅಂಧೇರಿಯಲ್ಲಿ ಪಾನ್ಶಾಪ್ ನಡೆಸುತ್ತಿರುವ ಇವರು ಕಳೆದ ವಾರವಷ್ಟೇ ಇಲ್ಲಿನ ಬಾಲೇಶ್ವರ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ಜಾತ್ರೆಗೆಂದು ಊರಿಗೆ ಬಂದಿದ್ದರು ಎನ್ನಲಾಗಿದೆ.  ಇದೇ 28ರಂದು ಪುತ್ತೂರಿನಲ್ಲಿ ನಡೆಯಲಿದ್ದ  ಪತ್ನಿ ಸಂಬಂಧಿಕರೊಬ್ಬರ ವಿವಾಹಕ್ಕೆ ಎರಡು ದಿನಗಳ ಹಿಂದೆಯೇ ಒಟ್ಟಾಗಿ ಪತ್ನಿ ಮನೆಗೆ ತೆರಳಿದ್ದು, ಬುಧವಾರ ಸಂಜೆ ಇವರೊಬ್ಬರೇ ಮನೆಗೆ ವಾಪಾಸು ಬಂದು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಿಗ್ಗೆ ಎಂದಿನಂತೆ ಮೃತರ ಸಹೋದರನ ಪತ್ನಿ ನೀರು ತರಲೆಂದು ಬಾವಿ ಬಳಿ ಬಂದಾಗಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *