ಕೈಕಂಬ: ಶ್ರೀ ಕ್ಷೇತ್ರ ನಂದ್ಯ ಅಡ್ಡೂರಿನಲ್ಲಿ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣುಮೂರ್ತಿ, ಶ್ರೀ ಭಗವತೀ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ ವರ್ಷಾವಧಿ ಉತ್ಸವವು ಜ.30 ಶನಿವಾರದಿಂದ ಜ.31 ಆದಿತ್ಯವಾರದವರೆಗೆ ನಡೆಯಲಿದೆ.
ಜ.29 ಶುಕ್ರವಾರ ಪೂರ್ವಾಹ್ನ 8 ಗಂಟೆಗೆ ಗಣಹೋಮ, ಜ.30 ಶನಿವಾರ ಬೆಳಗ್ಗೆ 10.30ಕ್ಕೆ ನಾಗದೇವರಿಗೆ ತಂಬಿಲ ಸೇವೆ, 12 ಗಂಟೆಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಮುಡಿಪು ಶುದ್ಧಿ ಮತ್ತು ಮುಡಿಪು ಕಟ್ಟವುದು. 1ಗಂಟೆಗೆ ಪ್ರಸಾದ ವಿತರಣೆ, ಸಂಜೆ 6ಕ್ಕೆ ಶ್ರೀ ವಯನಾಡು ಕುಲವನ್ ಶ್ರೀ ವಿಷ್ಣುಮೂರ್ತಿ ದೈವಗಳ ಕಾಲಾವಧಿ ಪರ್ವ, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ, 9ಗಂಟೆಗೆ ಶ್ರೀ ಧೂಮಾವತಿ ಬಂಟ, ಮಹಿಷಂದಾಯ ದೈವಗಳ ನೇಮೋತ್ಸವ ಜರಗಲಿರುವುದು.
ಜ.31 ಆದಿತ್ಯವಾರ ಸಂಜೆ 5 ಗಂಟೆಗೆ ಮರುಪುತ್ತರಿ, ರಾತ್ರಿ 8ಕ್ಕೆ ಉಬರ ಕಲ್ಲರ್ಟಿ ಕಲ್ಕುಡ, ಕಲ್ಲುರ್ಟಿ ಪಂಜುರ್ಲಿ, ಕೊರತಿ, ಗುಳಿಗ ದೈವಗಳ ಕೋಲ ನಡೆಯಲಿದೆ.
