ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇ.ಆರ್.ಎಸ್.ಡಬ್ಲ್ಯೂ ಯೋಜನೆಯ ಪ್ರೇರಣಾ ಮಹಿಳಾ ಸ್ವ-ಸಹಾಯ ಸಂಘಗಳ ಸಾಂಸ್ಕ್ರತಿಕ ಕೂಟ ಹಾಗೂ ವಲಯ ಉಕ್ಕೂಟ ಸಭೆಯು ಇತ್ತೀಚೆಗೆ ಗುರುಪುರ ಪಂಚಾಯತ್  ಸಭಾಂಗಣದಲ್ಲಿ ನೆರವೇರಿತು.
1

26vp samskrutika spardhakutaಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್‍ರವರು ಉಪಸ್ಥಿತರಿದ್ದು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯ ಜೊತೆಜೊತೆಗೆ ವಿವಿಧ ಸ್ಪರ್ಧೆಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಬೇಕೆಂದು ಹೇಳಿದರು. ಕೈಕಂಬ ವಲಯದ ಎಲ್ಲಾ ಸ್ವ-ಸಹಾಯ ಸಂಘದ ಸದಸ್ಯರು ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಲಯ ಒಕ್ಕೂಟ ಸಭೆಯಲ್ಲಿ ತ್ಯಾಜ್ಯ ವಿಲೆವಾರಿ, ಪೈಪ್ ಕಂಪೋಸ್ಟ್ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಒಕ್ಕೂಟದ ಅಧ್ಯಕ್ಷರಾದ ಶೋಭಾ ನೆರವೇರಿಸಿದರು. ವಲಯದ ಪದಾಧಿಕಾರಿಯಾದ ಸವಿತಾರವರು ಧನ್ಯವಾದ ಗೈದರು. ವಲಯ ಸಂಯೋಜಕ ಹಾಗೂ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *