ಬಂಟ್ವಾಳ : ಯುವ ಶಕ್ತಿಯನ್ನು ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗೌ/ಹಿರಿಯ ಸಿವಿಲ್ ನ್ಯಾಯಾಧೀ ಶ ಚಂದ್ರಶೇಖರ ಯು ನುಡಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ವಕೀಲರ ಸಂಘ ಬಂಟ್ವಾಳ ಹಾಗೂ ನವೋದಯ ಮಿತ್ರಕಲಾ ವೃಂದ ರಿ. ನೆತ್ತರಕೆರೆ ಮತ್ತು ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇವರ ಜಂಟಿ ಆಶ್ರಯದಲ್ಲಿ ನವೋದಯ ಮಿತ್ರಕಲಾ ವೃಂದ ಸಭಾ ಭವನದಲ್ಲಿ ರಾ ಷ್ಟ್ರೀಯ ಯುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಪಿ.ಜಯರಾಮ ರೈ ಜನಸಾಮಾನ್ಯರಿಗೆ ಕಾನೂನು ಹಾಗೂ ಮೋಟಾರು ವಾಹನ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ನವೋದಯ ಮಿತ್ರಕಲಾ ವೃಂದದ ಗೌರವಾಧ್ಯಕ್ಷ ಪಿ.ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ , ನೇತಾವತಿ ಮಾತೃ ಮಂಡಳಿ ಸಂಚಾಲಕಿ ಲಲಿತಾ ಸುಂದರ, ನ್ಯಾಯವಾದಿಗಳಾದ ರಮೇಶ್ ಉಪಾಧ್ಯಾಯ, ಅಶ್ವನಿ ಕುಮಾರ್ ರೈ ,ಪುಂಚಮೆ ಚಂದ್ರಶೇಖರ ರಾವ್, ಅಡ್ಡೂರು ಅಜಿತ್ ರಾವ್, ಸತೀಶ್ ಬಿ. ಉಪಸ್ಥಿತರಿದ್ದರು. ನ್ಯಾಯವಾದಿ ಆಶಾ ಪ್ರಸಾದ್ ರೈ ಸ್ವಾಗತಿಸಿದರು. ನ್ಯಾಯವಾದಿ ರೋ ಶನ್ ಡಿಸೋಜ ವಂದಿಸಿದರು. ದಾಮೋದರ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
