ಮೂಡುಬಿದರೆ: ಸರ್ಕಾರಿ ಸೇವೆಯಲ್ಲಿ ವಗಾವಣೆ ಎಂಬುವುದು ಹರಿಯುವ ನೀರಿನಂತೆ. ಹರಿಯುವ ನೀರು ಎಂದಿಗೂ ಪರಿಶುದ್ಧತೆಯಿಂದ ಕೂಡಿರುತ್ತದೆ. ನಿಷ್ಠೆ-ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ವ್ಯಕ್ತಿಯನ್ನು ಸಮಾಜ ಗುರುತಿಸುತ್ತದೆ ಎಂದು ಡಾ. ಪ್ರಕಾಶ್ ಹೇಳಿದರು.
ಕಳೆದ 12 ವರ್ಷಗಳ ಕಾಲ ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಗೊಂಡಿದ್ದ ಅವರಿಗೆ ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮೂಡಬಿದರೆ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಸೀಬಾ ಅಧ್ಯಕ್ಷತೆಯಲ್ಲಿ ಜರಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಅಭಿಲಾಷ್, ನಿವೃತ್ತ ಆರೋಗ್ಯ ಪರೀಕ್ಷಕಿ ಸುನಂದಾ ಪಾಲ್ಗೊಂಡಿದ್ದರು.
ಅಕ್ಷತಾ ಸ್ವಾಗತಿಸಿದರು.
ಡಾ. ಪ್ರಕಾಶ್ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಫಲ,ಪುಷ್ಪಗಳೊಂದಿಗೆ ಸನ್ಮಾನಿಸಲಾಯಿತು. ಸಿಬ್ಬಂದಿ ವರ್ಗದವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪ್ರಥಮ ದರ್ಜೆ ಸಹಾಯಕ ಐವನ್ ಕುಟಿನಾ, ಹಿರಿಯ ಆರೋಗ್ಯ ಸಹಾಯಕ ಎಚ್.ಯಶೋಧರ ಕಾರ್ಯಕ್ರಮ ಸಂಘಟಿಸಿದರು.
ರಾಷ್ಟ್ರೀಯ ಕುಷ್ಟರೋಗ ನಿವಾರಣಾ ಘಟಕದ ಸುರೇಶ್ ನಿರೂಪಿಸಿದರು. ಆಶಾ ಫಿಸಿಲಿಟೇಟರ್ ಜಯಂತಿ ಧನ್ಯವಾದವಿತ್ತರು.
