ಬಂಟ್ವಾಳ: ಮಣಿಹಳ್ಳ ಹಿಂದೂ ಯುವಸೇನೆ ಏಕಲವ್ಯ ಶಾಖೆ ಮತ್ತು ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿ ಅವರ ಸಹಭಾಗಿತ್ವದಲ್ಲಿ ಸಹಸ್ರ ಎಳ್ಳು ಗಂಟು ದೀಪೋತ್ಸವವು ಮಣಿಹಳ್ಳ ಪಣೆಕಲಪಡ್ಪು ಮೈದಾನದಲ್ಲಿ ಜರಗಿತು.ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪ್ರಗತಿಪರ ಕೃಷಿಕ ರಾಜೇಶ್ನಾಕ್ ಉಳಿಪಾಡಿಗುತ್ತು, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ಬಂಟ್ವಾಳ,ಬಂಟ್ವಾಳ ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಜಿ.ಆನಂದ ಬಂಟ್ವಾಳ, ಗೋಪಾಲ ಬಂಟ್ವಾಳ ,ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಭಟ್, ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾವೂರು , ತಾಲೂಕು ಘಟಕ ಅಧ್ಯಕ್ಷ ಪುಷ್ಪರಾಜ ಬಂಟ್ವಾಳ, ಸಂಘದ ಅಧ್ಯಕ್ಷ ವಸಂತ ಕುಮಾರ್ ಕೊಂಗ್ರಬೆಟ್ಟು, ಗೌರಾವಾಧ್ಯಕ್ಷ ರಾಮಚಂದ್ರ ಗೌಡ ಮಣಿ, ಕಾರ್ಯದರ್ಶಿ ಗಳು ಮಿಥುನ್, ಹರೀಶ್, ಸಂಘಟನಾ ಕಾರ್ಯದರ್ಶಿ ನವೀನ್ ಮಣಿಹಳ್ಳ ಮತ್ತು ಸರ್ವಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಸಂಜೆ ಕೇಲ್ದೋಡಿ ಪಂಜಿಕಲ್ಲು ಬ್ರಹ್ಮಶ್ರೀ ನಾರಾಯಣ ಗುರು ಭಜನ ಮಂಡಳಿ ಸದಸ್ಯರಿಂದ ನೃತ್ಯಭಜನೆ ಜರಗಿತು.
