ಬಂಟ್ವಾಳ: ಇತ್ತೀಚೆಗೆ ಹತ್ಯೆಯಾದ ನಾವುರ ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ರವಿರಾಜ್ ಅವನನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಅಹಮ್ಮದಾಬಾದ್ನಲ್ಲಿ ಬಂದಿಸಿದ್ದಾರೆ. ನ. 12ರಂದು ಅಮಾಯಕ ಹರೀಶ್ ಪೂಜಾರಿಯನ್ನು ನಾವೂರದಲ್ಲಿ ಕೊಲೆ ನಡೆಸಿದ ನಾಲ್ವರು ಆರೋಪಿಗಳಲ್ಲಿ ಈತ ತಲೆಮರೆಸಿಕೊಂಡಿದ್ದ. ಮುವರ ಬಂಧನ ಕೂಡಲೇ ಮಾಡಿದ ಪೋಲಿಸರಿಗೆ ಈತನ ಬಂಧನಕ್ಕೆ ಒತ್ತಾಯಗಳು ಕೇಳಿ ಬರುತ್ತಿತ್ತು. ಹಾಗಾಗಿ ಈತನ ಬಂದನಕ್ಕಾಗಿ ಪೋಲೀಸರು ಬಲೆ ಬೀಸಿದ್ದರು. ಕೊನೆಗೂ ಬೆಂಬಿಡದ ಪೋಲೀಸರು ನಿನ್ನೆ ಗುಜರಾತ್ ರಾಜ್ಯದ ಅಹಮ್ಮಾದಾಬಾದ್ ಜಿಲ್ಲೆಯ ವಸ್ರ್ತಾಪುರ ಎಂಬಲ್ಲಿ ಅತನ ಚಿಕ್ಕಪ್ಪ ರಮೇಶ್ ಅವರ ಮನೆಯಲ್ಲಿ ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಸ್.ಪಿ.ಶರಣಪ್ಪ ಮತ್ತು ಎ.ಎಸ್.ಪಿ. ರಾಹುಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸೆಪೆಕ್ಟರ್ ಬೆಳ್ಳಿಯಪ್ಪ ನೇತ್ರತ್ವದಲ್ಲಿ ಗ್ರಾಮಾಂತರ ಪೋಲೀಸ್ ಸಭ್ ಇನ್ಸೆಪೆಕ್ಟರ್ ರಕ್ಷತ್ ಮತ್ತು ಎ.ಎಸ್.ಐ ರಮೇಶ್, ಪಿ.ಸಿ. ಜಗದೀಶ ಮತ್ತು ರಾಜಾ ಕಾರ್ಯಚರಣೆಯಲ್ಲಿ ಪಾಲ್ಗೋಂಡಿದ್ದರು

By suddi9

Leave a Reply

Your email address will not be published. Required fields are marked *