ಕೈಕಂಬ:ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇದರ ನೂತನ ಸಭಾಭವನದ ಕಾಮಗಾರಿಯನ್ನು ಜ.16ಶನಿವಾರ ಚರ್ಚಿನ ಧರ್ಮಗುರುಗಳಾದ ವಂದನೀಯ ಸಿಪ್ರಿಯನ್ ಪಿಂಟೋರವರು ಪ್ರಾರ್ಥನಾ ವಿಧಿ ನಡೆಸಿ ಆಶೀರ್ವಚಿಸಿ ಪ್ರಾರಂಬಿಸಿದರು. ಈ ಕಾರ್ಯಕ್ಕೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಶನ್ ಎಂ.ಕಾಮತ್, ಕಾರ್ಯದರ್ಶಿ ಜೋಕಿಂ ಡಿ’ಸೋಜ, ಇಂಜಿನಿಯರ್ ಲೊರೆನ್ಸ್ ಕುಟಿನ್ಹಾ, ಗುತ್ತಿಗೆದಾರರಾದ ರಿಚರ್ಡ್ ರೊಡ್ರಿಗಸ್, ಸಿ/ಝೀನಾ, ಸಿ/ನಂದಿತ, ಸಿ/ಡ್ಯಾಫ್ನಿ, ಸಿ/ಮಾರಿಯೆಟ್, ಶೋಭಾ ಮಂಡೊನ್ಸಾ ಉಪಸ್ಥಿತರಿದ್ದರು.

