ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿವಂಗತ ಸರಸ್ವತಿ ಕೆ.ಪೂಂಜ ಮತ್ತು ದಿವಂಗತ ಕೆ.ಕಾಂತಪ್ಪ ಪೂಂಜ ಇವರ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ ‘ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ’ ಕಾರ್ಯಕ್ರಮವನ್ನು ನರಿಕೊಂಬು ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ್ ಉದ್ಘಾಟಿಸಿದರು.

ಹೃದಯ ತಜ್ಞ ಡಾ.ಸುಬ್ರಹ್ಮಣ್ಯಂ ಕೆ., ಡಾ.ವಿಜಿತ್ ಶೆಟ್ಟಿ, ಡಾ.ಸೀಮಾ ಎಸ್.ಶೆಟ್ಟಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ,ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ, ಯೋಜನೆ ಮೇಲ್ವಿಚಾರಕ ವಿನಾಯಕ ಗುನಗ, ವೃಂದಾಪೂಜಾರಿ, ಶಾಲಿನಿ ಕೆ.ಪೂಂಜ ಮತ್ತಿತರರು ಇದ್ದರು.
