ಬಂಟ್ವಾಳ; ಕಳೆದ ಆರೂವರೆ ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿಯ ಕುರಿತಾಗಿ ಪತ್ನಿ ಶುಕ್ರವಾರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಬೆಂಜನಪದವು ಗ್ರಾಮದ ಕರಾವಳಿ ಸೈಟ್ ನಿವಾಸಿ ವಿಮಲ ಎಂಬವರು ದೂರು ನೀಡಿದ್ದು, ತನ್ನ ಪತಿ ಪೂವಪ್ಪ ಸಾಲ್ಯಾನ್ ಕಳೆದ 2009 ರ ಎ.18 ರಂದು ನಾಪತ್ತೆಯಾದವರು ಈತನಕ ವಾಪಾಸು ಬಂದಿಲ್ಲ, ಕಾನೂನಿನ ಅರಿವು ಇಲ್ಲದೇ ಇದ್ದುದರಿಂದ ಈತನಕ ಪೊಲೀಸ್ ದೂರು ನೀಡಿರಲಿಲ್ಲ ಎಂದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

