ಮಂಗಳೂರು:ವಿವಾಹ ಸಮಾರಂಭದಲ್ಲಿ ಉಡುಗೊರೆ ಬೇಡವೆಂದಿದ್ದರೆ ಏನು ಮಾಡುತ್ತಾರೆ? “ಆಶೀರ್ವಾದವೇ ಉಡುಗೊರೆ”ಎಂದು ಆಮಂತ್ರಣ ಪತ್ರಿಕೆಯಲ್ಲಿ ಅಚ್ಚು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ವಧೂವರರು ಉಡುಗೊರೆ ತಮಗೆ ಬೇಡ, ಕೊಡುವುದಾದರೆ ಆಶ್ರಮಕ್ಕೆ ಕೊಡಿ ಎಂದು ಮನವಿ ಮಾಡಿದ್ದಾರೆ.ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಡ್ ಪವನ್ ಈ ನಿರ್ಧಾರ ಕೈಗೊಂಡವರು. ಪೊಳಲಿಯಲ್ಲಿರುವ ಶ್ರೀ ರಾಮಕೃಷ್ಣ ತಪೋವನದ ವಿಳಾಸವನ್ನು ಆಮಂತ್ರಣ ಪತ್ರಿಕೆಯಲ್ಲಿ ಅಚ್ಚು ಹಾಕಿಸಿದ್ದು ಹೀಗೆ ” ದೇವರು ನನ್ನ ಜೀವನ ಸಖಮಯವಾಗಿಸಲು ಆಶೀರ್ವಾದ ನೀಡಿದ್ದಾನೆ. ಆದರೆ ಅದೆಷ್ಟೂ ಮಂದಿ ಇನ್ನು ಸಂಕಷ್ಟದಲ್ಲಿದ್ದಾರೆ. ನೀವು ನಮ್ಮ ಮದುವೆಗೆ ಆಗಮಿಸಿ ಆಶೀರ್ವದಿಸಿ ಉಡುಗೊರೆ ನೀಡಬೇಂದಿದ್ದರೆ ಪೊಳಲಿಯ ರಾಮಕೃಷ್ಣ ತಪೋವನಕ್ಕೆ ನೀಡಿ” ಎಂದು ಅಲ್ಲಿನ ವಿಳಾಸ ಮತ್ತು ವೆಬ್‍ಸೈಟ್‍ನ ವಿಳಾಸವನ್ನು ನೀಡಿದ್ದಾರೆ. ಈ ಅಹ್ವಾನಕ್ಕೆ ಸುಮಾರ್ 3.57 ಲಕ್ಷ ರೂ. ಹಣ ಆಶ್ರಮಕ್ಕೆ ದೇಣಿಗೆಯಾಗಿ ಬಂದಿದೆ. ಎಂದು ರಾಮಕೃಷ್ಣ ತಪೋವನದ ಕೆ. ಲೋಕನಾಥ್ ಮಾಹಿತಿ ನೀಡಿದ್ದಾರೆ.
