ಕೈಕಂಬ: ಸ್ವಾಮಿ ವಿವೇಕನಂದರ ಜನ್ಮದಿನೋತ್ಸದ ಅಂಗವಾಗಿ ರಾಮಕೃಷ್ಣ ತಪೋವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಜ.12 ರಂದು ಆಚರಿಸಿಲಾಯಿತು. ರಾಮಕೃಷ್ಣತಪೋವನದ ಸ್ವಾಮೀ ವಿವೇಕಚೈತನ್ಯನಂದ ಅವರು ಮೆರವಣಿಗೆಗೆ ಚಾಲನೆ ನೀಡಿದರು. ವಿವೇಕನಂದ ಯಾತ್ರೆಯು ಪೊಳಲಿ ರಾಮಕೃಷ್ಣ ತಪೋವನದಿಂದ ಪೊಳಲಿ ಮಾರ್ಗವಾಗಿ ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಅಡ್ಡೂರಿನವರೆಗೆ ಸಾಗಿ ರಾಮಕೃಷ್ಣ ತಪೋವನದಲ್ಲಿ ಸಮಾಪನೆಗೊಂಡಿತು. ಸುಮಾರು 2ಸಾವಿರದಷ್ಟು ನಾನಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಊರಿನ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದರು. ನಂತರ ಸ್ವಾಮೀಜಿ ವಿವಿಧ ಸ್ಪರ್ಧೆಗಳನ್ನು ಎರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.





















