ಬಂಟ್ವಾಳ: ನರಿಕೊಂಬು ಗ್ರಾಮದ ಶೇಡಿಗುರಿ ನಾಟಿಯಿಂದ ಶ್ರೀ ಕೋದಂಡರಾಮ ಚಂದ್ರ ದೇವಸ್ಥಾನಕ್ಕೆ ನರಿಕೊಂಬು ಪಂಚಾಯತ್ ವತಿಯಿಂದ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಉದ್ಘಾಟಿಸಿದರು. ಈ ಸಂದರ್ಭ ಪಂ. ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಕೆ. ಮಾಧವ ಕರ್ಬೆಟ್ಟು, ತ್ರೀವೇಣಿ ಕೇದಿಗೆ, ವಿಶ್ವನಾಥ ಕೊಡಂಗೆಕೋಡಿ, ರವೀಂದ್ರ ಸಪಲ್ಯ, ದೇವಸ್ಥಾನದ ಅರ್ಚಕರಾದ ಬಿ. ಬಾಲಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಪೋತ್ತಮ ನಾಟಿ,ಪ್ರಮುಖರಾದ ಪ್ರಭ ಡ್ರೈವರ್, ಪದ್ಮನಾಭ, ಪಂ. ಪಿಡಿಓ ಗಿರಿಜಾ, ಪ್ರಶಾಂತ್, ಸುರೇಶ್, ವಾಮನ, ನಿತೇಶ್, ದಿನೇಶ್, ಉಪಸ್ಥಿತರಿದ್ದರು.

