ಬಂಟ್ವಾಳ : ಪುರಸಭಾ ವ್ಯಾಪ್ತಿಯ ದರಿಬಾಗಿಲು-ಪೆತ್ತಮುಗೇರು ಎಂಬಲ್ಲಿ ಸ್ಥಳೀಯ ಸದಸ್ಯರ ಮುಕ್ತನಿಧಿಯಿಂದ 6.0ಲಕ್ಷ ವೆಚ್ಚದ ನೂತನ ಕಾಂಕ್ರೀಟ್ ರಸ್ತೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ , ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ , ಮಹಮ್ಮದ್ ಶರೀಫ್, ಜಗ ದೀಶ್ ಕುಂದರ್, ಪ್ರವೀಣ್ ಬಿ., ಪ್ರಭಾ ಆರ್ ಸಾಲಿಯಾನ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಭೂನ್ಯಾಯ ಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಸ್ಥಳೀಯ ಪಂ.ಸದಸ್ಯ ಮಧುಸೂದನ್ ಶೆಣೈ, ಮಾಜಿ ಸದಸ್ಯ ಪದ್ಮನಾಭ ರಾವ್ ಕನಪಾಡಿ, ಪುರಸಭಾ ಮುಖ್ಯಾಧಿಕಾರಿ ಸುಧಾಕರ ಭಟ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ, ಗುತ್ತಿಗೆದಾರ ಬಾಬು ರಾಜೇಂದ್ರ ಶೆಟ್ಟಿ ಹಾಗೂ ದಿನೇಶ್ ರೈ ಕುಪ್ಪಿಲ ಉಪಸ್ಥಿತರಿದ್ದರು.

