ಬಂಟ್ವಾಳ : ಬ್ರಹ್ಮರಕೊಟ್ಲುವಿನಿಂದ ಜಾರಂದಗುಡ್ಡೆ – ಪಚ್ಚಿನಡ್ಕ – ಪೊಳಲಿ ಮಾರ್ಗವಾಗಿ ಕಟೀಲು ಸಂಪರ್ಕಿಸಲು ನೂತನ ಸಾರಿಗೆ ವ್ಯವಸ್ಥೆಗೆ ಹೊಸ ಪರವಾನಿಗೆ ಒದಗಿಸಿ ನೂತನ ಬಸ್ ಸಂಚಾರಕ್ಕೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಚಾಲನೆ ನೀಡಿದರು. ಕಳ್ಳಿಗೆ ಪಂ.ಅಧ್ಯಕ್ಷೆ ರತ್ನಾ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಸದಾಶಿವ ಬಂಗೇರಾ, ಮಹಮ್ಮದ್ ಶರೀಫ್, ಜಗ ದೀಶ ಕುಂದರ್, ಪ್ರವೀಣ್ ಬಿ., ಪ್ರಭಾ ಆರ್ ಸಾಲಿಯಾನ್, ಸ್ಥಳೀಯ ಸದಸ್ಯರಾದ ಮಧುಸೂದನ್ ಶೆಣೈ, ವಿಜಯ್ ಡಿಸೋಜ, ರಮೇಶ್ ಮುಗೇರಾ, ಭಾಗೀರಥಿ, ಭೂನ್ಯಾಯ ಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಭೂ ಅಭಿವೃದ್ಧಿ ಬ್ಯಾಂಕಿನ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ, ಮಾಜಿ ಪಂ.ಸದಸ್ಯ ಪದ್ಮನಾಭ ರಾವ್ ಕನಪಾಡಿ, ಬಸ್ ಮಾಲಕರಾದ ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ ಹಾಗೂ ಪ್ರಮುಖರಾದ ನಾಗೇಶ್ ಶೆಟ್ಟಿ ಪರಿಯೋಡಿಬೀಡು, ಹಮೀದ್ ವಳವೂರು, ಹಸನಬ್ಬ ಬ್ರಹ್ಮರಕೊಟ್ಲು ಉಪಸ್ಥಿತರಿದ್ದರು



