ಬರಹಗಳಲ್ಲಿ ಮಾನವೀಯ ಅನುಕಂಪವಿರಬೇಕು :ರವಿ ರಾ.ಅಂಚನ್
ಮುಂಬಯಿ, ಜ.02: ಚಹರೆಗೂ ಬದುಕಿಗೂ ಸಾಂಗತ್ಯದ ಬರಹ ಕಷ್ಟಕರ. ನಮ್ಮ ಬರಹಗಳು ಇತರರನ್ನು
ಮೆಚ್ಚಿಸುವ, ಚುಚ್ಚುವ, ನಮ್ಮನ್ನೇ ನಾವು ಕೊಚ್ಚಿ ಕೊಳ್ಳುವ ಮಿತಿಯಲ್ಲೇ ಗಿರ್ಕಿ ಹೊಡೆಯಬಾರದು. ಅಲ್ಲಿ
ಮಾನವೀಯ ಅನುಕಂಪವಿರಬೇಕು. ವಾಣಿ ಶೆಟ್ಟಿ ಅವರ `ಅಮ್ಮ’ ಕವನಸಂಕಲನನಮಗೆ ಮಾತೆಯಂತೆ ಸ್ಪಷ್ಟ.
ಹಲವರಿಗೆ ಅಪ್ಪ ಮಾತ್ರ ನಂಬಿಕೆ. ಆದರೆ ಇಲ್ಲಿಯ ಕವನಗಳು ಅಮ್ಮನ ಪ್ರೀತಿಯಲ್ಲೂ ಅಪ್ಪನ ವಾತ್ಸಲ್ಯದಲ್ಲೂ
ಧ್ವನಿ ಪಡೆಯುತ್ತದೆ. ಅತ್ತಾಗ ಕಣ್ಣೊರೆಸುವ, ನಕ್ಕಾಗ ಕಣ್ಣರಳಿಸುವ, ನೋವಿಗೆ ಕಿವಿಯಾಗುವ ನಲಿವಿಗೆ
ಕೊರಳಗುವ ಧ್ವನಿಯನ್ನು `ಅಮ್ಮ’ ಕವನದಲ್ಲಿ ಗುರುತಿಸಬಹುದು ಎಂದು ನಾಡಿನ ಹೆಸರಾಂತ ಅಂಕಣಗಾರ,
ಸಾಹಿತಿ ರವಿ ರಾ.ಅಂಚನ್ ನುಡಿದರು.
ಕಳೆದ ಶನಿವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿಕರ್ನಾಟಕ ಸಂಘ ಮುಂಬಯಿ ಸಂಸ್ಥೆಯ ಸಮರಸ
ಭವನದಲ್ಲಿ ಮೂಕಾಂಬಿಕಾ ಪ್ರಕಾಶನ ಮೂಡಬಿದ್ರೆ ಬಿಡುಗಡೆ ಪ್ರಕಾಶಿತ ಉದಯೋನ್ಮುಖ ಕವಯತ್ರಿ,
ಸಾಹಿತ್ಯಾಭಿಮಾನಿ ವಾಣಿ ಶೆಟ್ಟಿ ಮೂಡಬಿದ್ರೆ ಅವರ`ಅಮ್ಮ’ಚೊಚ್ಚಲಕವನಸಂಕಲನದ ಬಿಡುಗಡೆಕಾರ್ಯಕ್ರ
ಮವನ್ನು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮುನ್ನಡೆಸಿ ರವಿ
ರಾ.ಅಂಚನ್ ನುಡಿದರು.

ಗೋರೆಗಾಂವ್ ಕರ್ನಾಟಕ ಸಂಘ ಮುಂಬಯಿ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯಾರು ಕೃತಿ ಬಿಡುಗಡೆ
ಗೊಳಿಸಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಹಿರಿಯ ಕವಿ ಬಿ.ಎಸ್ ಕುರ್ಕಾಲ್ ಹಾಗೂ ಗೌರವ
ಅತಿಥಿಗಳಾಗಿ ರಂಗತಜ್ಞ ಡಾ| ಭರತ್‍ಕುಮಾರ್ ಪೆಲಿಪು, ಹೊಟೇಲು ಉದ್ಯಮಿಗಳಾದ ಮುಂಡಪ್ಪ ಎಸ್.
ಪಯ್ಯಡೆ, ವಿಜಯ ಭಂಡಾರಿ, ರಮೇಶ್ ವಿ.ಶೆಟ್ಟಿ ಪುನರ್‍ಗುತ್ತು ಉಪಸ್ಥಿತರಿದ್ದರು.
ವಾಣಿ ಶೆಟ್ಟಿ ಅವರ ಮೊದಲ ಕವನ ಸಂಕಲನ ನಮಗೆ ಖುಷಿ ಕೊಡುವ ಸಂಗತಿ. ಸಂಕಲನದಲ್ಲಿನ ಕವನಗಳಲ್ಲಿ
ವಾಣಿ ಅವರ ಪ್ರತಿಭೆ ಎದ್ದು ಕಾಣುತ್ತದೆ. ಸರಳ ಶೈಲಿಯಲ್ಲಿ ಸುಂದರವಾಗಿ ಕಾವ್ಯ ಮಾಡಿಸಿದ ವಾಣಿ ತಮ್ಮ
ಬರವಣಿಗೆಯನ್ನು ಇನ್ನಷ್ಟು ಮುನ್ನಡೆಸಿ ಜನಮೆಚ್ಚುಗೆ ಪಡುಯುವಂತಾಗಲಿ ಎಂದು ರಮೇಶ್ ಶೆಟ್ಟಿ ಪಯ್ಯಾರು
ಹಾರೈಸಿದರು.
ಮುಂಬಯಿಯಲ್ಲಿ ಸಾಕಷ್ಟು ಕನ್ನಡ ಸಾಹಿತ್ಯದ ಪುಸ್ತಕಗಳು ಪ್ರಕಾಶಗೊಳ್ಳುತ್ತದೆ. ಅವುಗಳಲ್ಲಿ 2015ರಲ್ಲಿ ಕವನ
ಕೃತಿಗಳೇ ಹೆಚ್ಚಾಗಿ. ಅಂತೆಯೇ 2016ರ ವರ್ಷಾರಂಭವೂ ವಾಣಿ ಅವರ ಕವನ ಸಂಕಲನದಿಂದಲೇ
ಆಗುತ್ತಿರುವುದು ಅಭಿನಂದನೀಯ ಎಂದು ಡಾ| ಪೆÇಲಿ¥ ಹರ್ಷ ವ್ಯಕ್ಯ ಪಡಿಸಿದರು.
ಬಿ.ಎಸ್.ಕುರ್ಕಾಲ್ ಮಾತನಾಡಿ ವಾಣಿ ಅವರ ಮೊದಲ ಕವನ ಸಂಕಲನ ಆಕರ್ಷಕವಾಗಿ ಮೂಡಿ ಬಂದಿದ್ದು
ಇವರೋರ್ವ ಅಪ್ರತಿಮ ಬರಹಗಾರ್ತಿ ಎನ್ನಲು ಅಭಿಮಾನವೆಣಿಸುತ್ತಿದೆ. ಬರಹಕ್ಕಿಂತ ಸಾಹಿತ್ಯ ರಚನೆ
ಪ್ರಯಾಸದ ಕೆಲಸ. ಕವಿಗಳಲ್ಲಿ ಲೋಕದ ಅರಿವು ಮತ್ತುಆತ್ಮಾಭಿಮಾನ ಪ್ರಧಾನವಾಗಿದ್ದು ಇದನ್ನು ವಾಣಿ
ಅವರು ರೂಢಿಸಿಕೊಂಡಂತಿದೆ ಎಂದರು.
ಮುಂಡಪ್ಪ ಪಯ್ಯಡೆ, ವಿಜಯ ಭಂಡಾರಿ, ರಮೇಶ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ವಾಣಿ ಶೆಟ್ಟಿ
ಅವರ ಸಾಹಿತ್ಯ ಲೋಕದ ಮುನ್ನಡೆಗೆ ಶುಭಾರೈಸಿದರು. ಸಾಹಿತಿ ಹಾಗೂ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಕೃತಿ
ಪರಿಚಯಗೈದರು. ಅಂಬಿಕಾ ಪ್ರಕಾಶನ ಮೂಡಬಿದ್ರೆ ರಮೇಶ್ ಶೆಟ್ಟಿ ಸ್ವಾಗತಿಸಿದರು. ಅನೇಕ ಕನ್ನಡಾಭಿನಿಗಳು
ಮತ್ತು ಕವಿಗಳು ಉಪಸ್ಥಿತರಿದ್ದು ಕೃತಿಕರ್ತೆ ವಾಣಿ ಶೆಟ್ಟಿ ಅವರು ಕವನ ಸಂಕಲನಕ್ಕೆ ಸಹಯೋಗವನ್ನಿತ್ತ
ಸರ್ವರನ್ನು ಅಭಿವಂದಿಸಿದರು. ಕವಯತ್ರಿ ಅರುಷಾ ಎನ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ
ನಿರೂಪಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು.











