ಮುಂಬಯಿ, ಜ.04: ಕೊಂಕಣಿಯಲ್ಲಿನ ಹೆಸರಾಂತ ಕೊಂಕಣಿ ರಂಗಪ್ರವೀಣ ಹೆನ್ರಿ ಡಿ’ಸಿಲ್ವಾಸುರತ್ಕಲ್
(ಮುಂಬಯಿ) ಅವರಚಿತ್ರಕಥೆರಚನೆ, ನಿರ್ಮಾಪಕತ್ವದಲ್ಲಿ ಕೆನಾರಾಯ್ಟ್ಸ್ ಯೂತ್ ಅಸೊಸಿಯೇಶನ್
ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (ಕ್ಯಾಮ್) ಬ್ಯಾನರ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ
`ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರದ ಚಿತ್ರೀಕರಣವು ಮುಂಬಯಿಯಾದ್ಯಾಂತ ಸಮಾಪ್ತಿ
ಗೊಂಡಿತು.ಮರಾಠಿ, ಬೋಜ್ಪುರಿ, ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿದ ಚಲನ ಚಿತ್ರೋದ್ಯಮಿ ಹ್ಯಾರಿ ಫೆರ್ನಾಂಡಿಸ್
(ಬಾರ್ಕೂರು) ಮುಂಬಯಿ ನಿರ್ದೇಶನದಲ್ಲಿನಾಯಕ ನಟನಾಗಿ ಪ್ರತಿಭಾನ್ವಿತ ಕಲಾವಿದರುಗಳಾದಎಲ್ಟೆನ್
ಮಸ್ಕರ್ಹೇನಸ್ ಮತ್ತು ನಾಯಕಿ ಪಾತ್ರದಲ್ಲಿ ಹೆಸರಾಂತ ಗಾಯಕಿ ಎಸ್ತೇರ್ ನೊರೋನ್ಹಾ ಚಲನಚಿತ್ರದ
ಮುಂಬಯಿ ಅಲ್ಲಿನ ಚಿತ್ರೀಕರಣವು ಪೂರ್ಣಗೊಂಡಿದೆ. ತಾರಾಗಣದಲ್ಲಿಪ್ರಿನ್ಸ್ ಜಾಕೋಬ್ (ಗೋವಾ)
ರಂಜಿತಾ ಲೂವಿಸ್, ಕ್ಲೆನ್ವಿನ್ ಫೆರ್ನಾಂಡಿಸ್, ಸುಜತಾ ಅಂದ್ರಾದೆ, ಸ್ಟೇನಿ ಅಲ್ವಾರೆಸ್ ಮತ್ತು ಆಲ್ವಿನ್
ಅಂದ್ರಾದೆಮತ್ತಿತರ ಕಲಾವಿದರು ಅಭಿನಯಿಸಿರುವರು.

ಮುಂಬಯಿ ನಗರದ ಫಿಲ್ಮ್ಸಿಟಿ, ಭಜನ್ಲಾಲ್ ಸ್ಟೂಡಿಯೋ ನಾಯ್ಗಾಂವ್, ಅಂಧೇರಿ ಪೂರ್ವದ
ಪಲೋಟ್ಟಿ ಚರ್ಚ್, ಎಂ ಕೆ ಶಾಹ ಜುವೆಲ್ಲರ್ಸ್ ಚಿರಾ ಬಜ್ಹಾರ್, ರೋನಿ ಗೋವಿಯಸ್ ಅವರ ಸ್ಕೈಲಿಂಕ್
ಕಛೇರಿ ಜೆ.ಬಿ ನಗರ್ ಅಂಧೇರಿ ಪೂರ್ವ, ನಂದವನ್ ಸ್ಟೂಡಿಯೋ, ಮಡ್ಐಲ್ಯಾಂಡ್ ಮತ್ತಿತ್ರ ಜಾಗಗಳಲ್ಲಿ
ಚಿತ್ರೀಕರಣ ಗೊಳಿಸಲಾಗಿದ್ದು ಬಾಲಿವುಡ್ನ ಹೆಸರಾಂತ ನಿರ್ದೇಶಕ ಲಾರೇನ್ಸ್ ಡಿ’ಸೋಜಾ ಅವರು
ಕ್ಲಾಪ್ಕಟ್ ನಡೆಸಿ ಚಿತ್ರೀಕರಣಕ್ಕೆ ಚಾಲನೆಯನ್ನೀಡಿದರು.
ಕೊಂಕಣಿ ಚಿತ್ರರಂಗದ ಕೊರಗನ್ನು ದೂರ ಮಾಡುವ ಸಲುವಾಗಿ ಹೆಸರಾಂತ ಕೊಂಕಣಿ ಭಾಷಾ ನಟ
ನಟಿಯರು ಹಾಗೂ ನಿರ್ದೇಶಕರ ತಂಡದೊಂದಿಗೆ ಈ ಸದಭಿರುಚಿಯ, ಅದ್ದೂರಿ ಕೊಂಕಣಿ ಚಿತ್ರ
ನಿರ್ಮಿಸಲಾಗುತ್ತಿದೆ. ಎಲ್ಲರೂ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಇದಾಗಿದ್ದು, ಪ್ರೀತಿ
ಹಾಗೂ ನಿಗೂಢತೆ, ಗ್ರಾಮೀಣ ಬದುಕಿನ ಕಷ್ಟಸುಖಗಳ ಕತೆಯಾಗಿದೆ ಎಂದು ನಿರ್ಮಾಪಕ ಹೆನ್ರಿ ಡಿ’ಸಿಲ್ವಾ
ಸುರತ್ಕಲ್ ತಿಳಿಸಿದ್ದಾರೆ. ಬಾರ್ಕೂರು, ಸಾಸ್ತಾನ, ಕಲಾಂಗಣ್ ಮತ್ತು ಮಂಗಳೂರು ನಗರ, ಕರಾವಳಿ
ಪ್ರದೇಶ ಚಿತ್ರೀಕರಣ ಗೊಳಿಸಲಾಗಿದೆ. ವಿಕ್ಟರ್ ಕೊನ್ಸೆಸೋ ಅವರ ಸಂಗೀತ ಸಂಯೋಜನೆ, ವಿಲ್ಸನ್
ಒಲಿವೆರಾ ಅವರ ಸಂಗೀತ ಮತ್ತುದಾಯ್ಜಿವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮಾಧ್ಯಮ
ಪಾಲುಗಾರಿಕೆಯಲ್ಲಿ ಈ ಚಿತ್ರ ನಿರ್ಮಿಸಲಾಗುತ್ತಿದ್ದು, 2016ನೇ ಮಾರ್ಚ್ ಕೊನೆ ವಾರದಲ್ಲಿ ತೆರೆಕಾಣಲಿದೆ
ಎಂದು ಚಿತ್ರ ನಿರ್ಮಾಪಕಹೆನ್ರಿ ಡಿ’ಸಿಲ್ವಾಸುರತ್ಕಲ್ ತಿಳಿಸಿದ್ದಾರೆ.








