ಎಸ್ ಓ ಎಸ್ ಮಂಗಳೂರು .
ದೆಹಲಿ, ಮುಂಬಯಿ, ಬೆಂಗಳೂರಿನಂತಹ ಹೆಚ್ಚಿನ ನಗರಗಳು ವಾಹನದ ಸಾಂದ್ರತೆಯಿಂದ ಮತ್ತು ವಾಹನದಿಂದ ಉಂಟಾಗುವ ಮಾಲಿನ್ಯದಿಂದ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಅದೇ ರೀತಿ ಮಂಗಳೂರು ನಗರವು ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದೆ. ಮಾಲಿನ್ಯ ತಡೆಯುವ ಚಲಾವಣೆ – ಆ್ಯಂಟಿ ಪೊಲಿಯುಷನ್ ಡ್ರವ್ (ಎ. ಪಿ. ಡಿ.) ಮಂಗಳೂರಿನ ಜನತೆಯಲ್ಲಿ ಈ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಾ ಬಂದಿರುತ್ತದೆ.
ಈಗಿರುವಂತಹ ರಸ್ತೆಯು ಚತುಷ್ಪದ ರಸ್ತೆಯಾಗಿ ಮಾರ್ಪಟ್ಟರೂ ಸಹ ಸಾರ್ವಜನಿಕರಿಗೆ ಆಗುವಂತಹ ಸಮಸ್ಯೆ ಹಾಗೂ ವಾಹನ ಸಾಂದ್ರತೆಯಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗದೇ ದಿನದಿಂದ ದಿನಕ್ಕೆ ಉಲ್ಬಣವಾಗಿಕೊಂಡು ಹೋಗಿರುತ್ತದೆ. ದಕ್ಷಿಣ ಕನ್ನಡದಲ್ಲಿ ಮಂಗಳೂರು ನಗರವು ಹೆಚ್ಚಿನ ವಾಹನ ಸಾಂದ್ರತೆಯನ್ನು ಹೊಂದಿರುವ ನಗರವಾಗಿರುತ್ತದೆ. ಇದರಿಂದಾಗಿ ನಮ್ಮ ದಿನನಿತ್ಯದ ಅಗತ್ಯತೆಗಳು ಹೆಚ್ಚಾಗುತ್ತಾ ಹೋಗಿ, ಅಗತ್ಯತೆಗಳನ್ನು ಈಡೇರಿಸುವ ಸಲುವಾಗಿ ವಾಹನದ ಬಳಕೆಯು ಅಗತ್ಯವಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ವಾಹನಗಳ ಸಂಖ್ಯೆಯು ಅಧಿಕವಾಗಿ ಅದರಿಂದ ಹೊರ ಬರುವ ಹೊಗೆಯಿಂದ ವಾಯು ಮಾಲಿನ್ಯವು ಹೆಚ್ಚಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಾ ಬಂದಿರುತ್ತದೆ. ಪ್ರಸ್ತುತ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶ್ವಾಸ ಸಂಬಂಧಿತ ಕಾಯಿಲೆಗಳು ಅಧಿಕವಾಗಿ ಬಂದಿರುತ್ತದೆ, ಈ ಸಮಸ್ಯೆಯು ದೊಡ್ಡವರನ್ನು ಸಹ ಕಾಡದೇ ಬಿಟ್ಟಿರುವುದಿಲ್ಲ. ಈ ಬಗ್ಗೆ ಮಂಗಳೂರಿನ ಜನತೆಯು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ದೆಹಲಿಯ ನಗರದ ಜನತೆಯನ್ನು ಕಾಡುವ ಸಮಸ್ಯೆಯು ಬಂದೊದಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ.
ಮಾಲಿನ್ಯ ರಹಿತ ಚಲಾವಣೆ (ಎ. ಪಿ. ಖ.)ಯು ಈ ಕೆಳಗೆ ತಿಳಿಸಿದಂತೆ ಜನರಲ್ಲಿ ವಾಹನದಿಂದ ಆಗುವಂತಹ ವಾಯು ಮಾಲಿನ್ಯಯನ್ನು ತಡೆಯಲು ಅಗತ್ಯವಾದ ಕ್ರಮವನ್ನು ಕೈಗೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿರುತ್ತದೆ:
1) ಏಕವಾಹನ ವ್ಯವಸ್ಥೆ: ಈ ವಿಷಯದ ಬಗ್ಗೆ ಮಂಗಳೂರಿನ ದೇರಳಕಟ್ಟೆ ಪ್ರದೇಶದಲ್ಲಿ ವೈದ್ಯರು, ವಿದ್ಯಾಥರ್ಿಗಳು ಹಾಗೂ ಇತರ ಪ್ರಯಾಣಿಕರು ಒಂದೇ ಸಮಯವನ್ನು ಅವಲಂಭಿಸಿ ಒಂದೇ ವಾಹನದಲ್ಲಿ (ಅಗತ್ಯಕ್ಕೆ ತಕ್ಕಂತೆ) ಪ್ರಯಾಣ ನಡೆಸುವುದು. ಈ ವ್ಯವಸ್ಥೆಯು ವಾಸ್ತವಿಕವಾಗಿ ಸಮಸ್ಯೆಯನ್ನು ಪರಿಹರಿಸಲು ಬಹಳಷ್ಟು ಪ್ರಮುಖ್ಯತೆಯನ್ನು ಪಡೆದಿರುತ್ತದೆ.
2) ಕಾಲೇಜು ಹಾಗೂ ಕಂಪನಿಗಳಿಗೆ ತೆರಲುವ ಜನರನ್ನು ಸಾಗಿಸುವ ವ್ಯವಸ್ಥೆ: ಸರಕಾರ ಹಾಗೂ ಆರ್. ಟಿ ಓ ಗಳು ಕಾಲೇಜು ಹಾಗೂ ಕಂಪನಿಗಳಿಗೆ ತೆರಳುವ ಜನರಿಗೆ ಸಂಬಂಧಪಟ್ಟ ಕಾಲೇಜು ಹಾಗೂ ಕಂಪನಿಗಳು ನಿಯುಕ್ತಿಗೊಳಿಸಿರುವ ವಾಹನ ವ್ಯವಸ್ಥೆಗಳಿಗೆ ಸಹಕಾರವನ್ನು ನೀಡುವುದು. ಇದರಿಂದಾಗಿ ಮೇಲೆ ಹೇಳಿದಂತಹ ಸಮಸ್ಯೆಗಳಿಂದ ಪಾರಾಗಲು ದಾರಿಯನ್ನು ಕಂಡುಕೊಳ್ಳಬಹುದಾಗಿದೆ.
3) ಸಾರ್ವಜನಿಕ ಸಂಚಾರ ವ್ಯವಸ್ಥೆ: ವಾಹನದ ಮೇಲ್ವಿಚಾರಣೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದು. ಪ್ರಸ್ತುತ ಅತೀ ಹೆಚ್ಚು ಹೊಗೆ ಉಗುಳುವಂತಹ ವಾಹನಗಳು ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
4) ವಾಹನ ಮಾಲಿನ್ಯ ದ್ರಢೀಕರಣಗೊಳಿಸುವ ಸಂಸ್ಥೆಯ ಬಗ್ಗೆ ನಿಗಾ ವಹಿಸುವುದು: ಪ್ರಸ್ತುತ ಕಂಡು ಬರುವಂತೆ ಹೆಚ್ಚಿನ ವಾಹನಗಳು ಅತ್ಯಧಿಕ ಹೊಗೆಯನ್ನು ಹೊರ ಸೂಸುವ ವಾಹನಗಳಾಗಿದ್ದು, ಯಾವುದೇ ನಿರ್ಬಂಧವನ್ನು ಹೇರದೇ ಮಾಲಿನ್ಯ ದ್ರಢೀಕರಣ ಪತ್ರವನ್ನು ಸಂಸ್ಥೆಯನ್ನು ನೀಡುತ್ತಾ ಬಂದಿರುತ್ತದೆ. ಈ ಬಗ್ಗೆ ದ್ರಢೀಕರಣ ಪತ್ರವನ್ನು ನೀಡುವ ಬಗ್ಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇರುವಂತಹ ವ್ಯವಸ್ಥೆಯು ಇಲ್ಲದಾಗಿದೆ.
5) ಈ ಬಗ್ಗೆ ನಿಯಂತ್ರಣವನ್ನು ಹೆರುವ ಠಾಣೆಯ ಸ್ಥಾಪನೆ: ಮಂಗಳೂರು ನಗರವು ವಾಹನದಿಂದ ಆಗುವ ಮಾಲಿನ್ಯದ ಬಗ್ಗೆ ನಿಯಂತ್ರಣ ಹೇರುವಂತಹ ಠಾಣೆಯನ್ನು ಹೊಂದಿರದೆ ಇರುವುದು. ಕೇವಲ ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ನಗರಕ್ಕೆ ಸಂಬಂಧಿಸಿದ ವಾಯು ಮಾಲಿನ್ಯದ ಬಗ್ಗೆ ವೈಜಾನಿಕ ರೀತಿಯಲ್ಲಿ ಅಧ್ಯಯನ ಮಾಡಿ, ಮಾಲಿನ್ಯವನ್ನು ತಡೆಯುವಂತಹ ವ್ಯವಸ್ಥೆಯನ್ನು ಮಾಡುತ್ತಾ ಬಂದಿರುತ್ತದೆ. ಅಲ್ಲದೇ ಈ ನಿಟ್ಟಿನಲ್ಲಿ ಅಭಿವ್ರದ್ಧಿಯನ್ನು ಹೊಂದಿರುವ ದಾಖಲೆಗಳನ್ನು ಸಂಗ್ರಹಿಸಿರುತ್ತದೆ.
6) ತಪ್ಪಿತಸ್ತರಿಗೆ ನಿದರ್ಾಕ್ಷಿನ್ಯ ಕ್ರಮವನ್ನು ಕೈಗೊಳ್ಳುವುದು: ಪ್ರಸ್ತುತವಾಗಿ ವಾಯು ಮಾಲಿನ್ಯದ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಮಾತ್ರ ಸಾಧಾರಣವಾದ ಕ್ರಮವನ್ನು ಕೈಗೊಳ್ಳುತ್ತ ಬಂದಿರುತ್ತದೆ. ಈ ಬಗ್ಗೆ ಜನರಲ್ಲಿ ಯಾವುದೇ ರೀತಿಯ ತನ್ನ ತಪ್ಪಿನ ಬಗ್ಗೆ ಭಯ ಹುಟ್ಟಿಸುವಂತಹ ಸರಿಯಾದ ಕಾನೂನು ಜಾರಿಯಲ್ಲಿ ಇರುವುದಿಲ್ಲ. ಆದುದರಿಂದ ಈ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಳ್ಳುವ ಕಾನೂನನ್ನು ಜಾರಿಗೊಳಿಸುವುದು ಅಗತ್ಯವಾಗಿದೆ.
7) ಸ್ಮಾರ್ಟ್ ಸಿಟಿ ಯೋಜನೆಗೆ ಅವಲಂಭಿಸಿದಂತೆ: ಮಂಗಳೂರನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಹನಿಗೊಳಿಸುವ ಸಲುವಾಗಿ ವಾಹನ ಮಾಲಿನ್ಯದ ಬಗ್ಗೆ ಹೆಚ್ಚಿನ ಕ್ರಮವನ್ನು ಕೈಗೊಳ್ಳುವುದು ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಭಿವ್ರದ್ಧಿಯನ್ನು ಸಾಧಿಸುವುದು ಅಗತ್ಯವಾದ ವಿಚಾರವಾಗಿರುತ್ತದೆ.
ಆದುದರಿಂದ ನಾವು ಜಿಲ್ಲಾ ಆಡಳಿತ, ಆರ್ ಟಿ ಓ , ಪೋಲೀಸ್ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆಯನ್ನು ಮತ್ತು ಸಂಘ ಸಂಸ್ಥೆ ಹಾಗೂ ಜನಸಾಮಾನ್ಯರಲ್ಲಿ ವಿನಂತಿ ಮಾಡುವುದೇನೆಂದರೆ, ವಾಹನದಿಂದ ಆಗುವಂತಹ ವಾಯು ಮಾಲಿನ್ಯದ ಬಗ್ಗೆ ಅಗತ್ಯವಾದ ಕ್ರಮವನ್ನು ಕೈಗೊಳ್ಳಲು ವಿನಂತಿಸಿಕೊಳ್ಳುತ್ತೇವೆ.
ಮಾಲಿನ್ಯ ರಹಿತ ಚಲಾವಣೆ (ಆ್ಯಂಟಿ ಪೊಲಿಯುಷನ್ ಡ್ರವ್) ಮಂಗಳೂರಿನಲ್ಲಿ ನೊಂದಾಣಿಯಾಗಿದ್ದು, ಈ ಸಂಸ್ಥೆಯು ಲಾಭರಹಿತವಾದ ಸೇವಯನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯು 2ನೇ ಅಕ್ಟೋಬರ್ 2014 ರಂದು ಸ್ಥಾಪನೆಕೊಂಡಿದ್ದು, ಭಾರತ ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಅಭಿಯಾನದೊಂದಿಗೆ ಕೈ ಜೋಡಿಸಿರುತ್ತದೆ. ಎ. ಪಿ. ಡಿ ಸಂಸ್ಥೆಯು ಮುಖ್ಯವಾಗಿ ಪರಿಸರ ಮಾಲಿನ್ಯದ ಬಗ್ಗೆ ಮತ್ತು ಜನರಲ್ಲಿ ಪರಿಸರ ಹಾಗೂ ವಾಯು ಮಾಲಿನ್ಯದಿಂದ ಉಂಟಾಗುವ ಸಮಸ್ಯೆಯ ಬಗ್ಗೆ ತಿಳಿ ಹೇಳುವಂತಹ ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿರುವ ಸಂಸ್ಥೆಯಾಗಿರುತ್ತದೆ ಮತ್ತು ನಮ್ಮ ನಗರದಲ್ಲಿ ಉಂಟಾಗುವ ವಾಯು ಮಾಲಿನ್ಯದ ತೀವ್ರತೆಯನ್ನು ತಡೆಯುವಂತೆ ಸೇವೆ ಮಾಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯು ಮುಖ್ಯವಾಗಿ ವಾಯು ಮಾಲಿನ್ಯದ ಬಗ್ಗೆ ಆಗುವಂತಹ ಅನಾಹುತಗಳನ್ನು ಮತ್ತು ವಾಯು ಮಾಲಿನ್ಯದಿಂದ ಜನಸಾಮಾನ್ಯರ ಮರಣ ಸಂಭವಿಸುವ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಸದರಿ ಸಮಸ್ಯೆಯಿಂದ ಪಾರಾಗಲು ದಾರಿಯನ್ನು ತೋರಿಸುವಂತಹ ಸಂಸ್ಥೆಯಾಗಿ ಸೇವೆಯನ್ನು ಸಲ್ಲಿಸುತ್ತ ಬಂದಿರುತ್ತದೆ.
