ಮಂಗಳೂರು, ಮೇ.12-ರಾಜ್ಯದ ಎಸ್ಎಸ್ಎಲ್ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಕನ್ನಡ ಮಾಧ್ಯಮದಲ್ಲಿ ಪ್ರಥಮ ರ್ಯಾಂಕ್ನ್ನು ಮಂಗಳೂರಿನ ಲಾವಣ್ಯ ಪಡೆದಿದ್ದಾಳೆ.

ಬಿಜೈನ ಲೂಡ್ಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಲಾವಣ್ಯ ಈಗ ರಾಜ್ಯದ ಗಮನ ಸೆಳೆದಿದ್ದು. ಈಕೆ 625 ಅಂಕಗಳಲ್ಲಿ 611 ಅಂಕ ಪಡೆದು ಶೇ.97.76 ಗರಿಷ್ಠ ಸಾಧನೆ ಮಾಡಿದ್ದಾಳೆ. ಗಣಿತ ಹಾಗೂ ಸಮಾಜದಲ್ಲಿ ಶೇ. ನೂರು ಅಂಕಗಳನ್ನು ಪಡೆದಿದ್ದಾಳೆ. ವಿಜ್ಞಾನದಲ್ಲಿ 94, ಕನ್ನಡ ಪ್ರಥಮ ಭಾಷೆಯಲ್ಲಿ 123 ಅಂಕ, ಎರಡನೇ ಭಾಷಾ ಜ್ಞಾನದಲ್ಲಿ 95 ಹಾಗೂ ಮೂರನೇ ಭಾಷಾ ಜ್ಞಾನದಲ್ಲಿ 99 ಅಂಕಗಳನ್ನು ಪಡೆದಿರುವುದು ವಿಶೇಷ.
ಬಿಜೈ ನಿವಾಸಿ ಉದ್ಯಮಿಯಾಗಿರುವ ಬಾಲಸುಬ್ರಹ್ಮಣ್ಯ ಹಾಗೂ ಪೂಣರ್ೀಮಾ ದಂಪತಿಗಳ ಸುಪುತ್ರಿ ಆಗಿದ್ದು ವಾಣಿಜ್ಯ ವಿಭಾಗದ ಮೂಲಕ ಆಕತೆಯ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲಿದ್ದೇನೆ ಎಂದು ಮಾಧ್ಯಮಕ್ಕೆ ಲಾವಣ್ಯ ಪ್ರತಿಕ್ರಿಯಿಸಿದ್ದಾಳೆ
