ಮಂಗಳೂರು: ಗೃಹೋಪಯೋಗಿ ಉಪಕರಣಗಳ ಜೀವನ ಸಂಗಾತಿಯಾಗಿ “ಹರ್ಷ” ಉತ್ಕೃಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮಾನವಾದ ಗುಣಮಟ್ಟ ಹಾಗೂ ಮಳಿಗೆಗಳನ್ನು ಹೊಂದಿ ವಿದೇಶಿ ಸಂಸ್ಥೆಗಳಿಗೆ ಸರಿಸಾಟಿಯಾಗಿ ನಿಂತಿದೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ತನ್ನ ವ್ಯವಹಾರ ಕ್ಷೇತ್ರವನ್ನು ದೇಶದ ರಾಜಧಾನಿ ದೆಹಲಿ ಹಾಗೂ ವಿದೇಶಗಳಿಗೂ ವಿಸ್ತರಿಸಲಿ, ಸಂಸ್ಥೆಯ ಸ್ಥಾಪಕ ಬೋಳ ಪೂಜಾರಿ ಅವರು ವ್ಯವಹಾರದಲ್ಲಿ ಮೌಲ್ಯಗಳನ್ನು, ಗ್ರಾಹಕ ಸೇವೆಯ ಬದ್ಧತೆಯನ್ನು ಕಾಯ್ದುಕೊಂಡು ಬಂದವರು. ಅವರು ಹಾಕಿಕೊಟ್ಟ ಇದೇ ಪರಂಪರೆಯಲ್ಲಿ ಹರ್ಷ ಸಾಗಿ ಬಂದಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಗೃಹೋಪಯೊಗಿ ಉತ್ಪನ್ನಗಳ ಹೆಸರಾಂತ ಮಳಿಗೆ `ಹರ್ಷ’ದ ಮಂಗಳೂರಿನ 2ನೇ ಮಳಿಗೆ ಹಾಗೂ ಸಂಸ್ಥೆಯ 11ನೇ ಮಳಿಗೆಯನ್ನು ನಗರದ ಹೃದಯಭಾಗದಲ್ಲಿರುವ ಫಳ್ನೀರ್ ರೋಡ್ನ ಮಿಲಾಗ್ರಿಸ್ ಜ್ಯುಬಿಲಿ ಮಾಲ್ನಲ್ಲಿ ಉದ್ಘಾಟಿಸಿ ಮಾತನಾಡಿದರು.
ನೂತನ ಮಳಿಗೆಯ ಪ್ರಥಮ ಗ್ರಾಹಕ ಅಶೋಕ್ ಮೆಂಡೋನ್ಸಾ ಅವರಿಗೆ ಖರೀದಿಯ ಬಿಲ್ನ್ನು
ಹಸ್ತಾಂತರಿಸಲಾಯಿತು. ಮಂಗಳೂರು ನಗರದ ಜೆಪ್ಪಿನಮೊಗರು ಕನ್ನಡ ಮಾಧ್ಯಮ ಶಾಲೆಗೆ ಸಂಸ್ಥೆಯಿಂದ ಕಂಪ್ಯೂಟರ್ ನೀಡಲಾಯಿತು.

Harsha Mangalore (6)

Harsha Mangalore (7)

Harsha Mangalore

Harsha Mangalore (1)

Harsha Mangalore (2)

Harsha Mangalore (3) (1)

Harsha Mangalore (4)
ರಾಜ್ಯ ಅರಣ್ಯ, ಪರಿಸರ ಖಾತೆ ಹಾಗೂ ದ. ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ
ಅಧ್ಯಕ್ಷತೆಯನ್ನು ವಹಿಸಿದ್ದರು.
ರಾಜ್ಯ ನಗರಾಡಳಿತ ಖಾತೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಆರೋಗ್ಯ ಸಚಿವ ಯು.ಟಿ. ಖಾದರ್, ಮೇಯರ್ ಮಹಾಬಲ ಮಾರ್ಲ, ಶಾಸಕರಾದ ಜೆ.ಆರ್.ಲೋಬೋ, ಗೋಪಾಲ ಪೂಜಾರಿ, ಸಿಂಡಿಕೇಟ್ ಬ್ಯಾಂಕಿನ ಎಜಿಎಂ ಪಳನಿಸ್ವಾಮಿ ಧರ್ಮಗುರು ಫ್ರಾನ್ಸಿಸ್ ಗೋಮ್ಸ್ , ಹಿರಿಯ ಉದ್ಯಮಿ ಜೆ.ವಿ. ಸೀತಾರಾಂ ಮಿಲಾಗ್ರೀಸ್ ಚರ್ಚ್ನನ ಧರ್ಮಗುರು ವಲೇರಿಯನ್ ಡಿಸೋಜಾ, `ಹರ್ಷ’ದ ಆಡಳಿತ ನಿರ್ಧೇಶಕ ಕೆ
ಸೂರ್ಯಪ್ರಕಾಶ್, ದಿ| ಬೋಳ ಪೂಜಾರಿ ಅವರ ಪತ್ನಿ ಹಾಗೂ ಸಂಸ್ಥೆಯ ಮಾರ್ಗದರ್ಶಕರಾದ ಯಶೋದಾ, ಸಂಸ್ಥೆಯ ನಿರ್ಧೇಶಕರುಗಳಾದ   ಅಶೋಕ್ ಕುಮಾರ್, ಸುರೇಶ್, ಹರೀಶ್, ರಾಜೇಶ್ ಉಪಸ್ಥಿತರಿದ್ದರು. ಗುಜ್ಜಾಡಿ ಪ್ರಭಾಕರ ನಾಯಕ್ ನಿರೂಪಿಸಿದರು. ಸಂಸ್ಥೆಯ ಎಜಿಎಂ (ಎಚ್ಆರ್) ಬಿ.ಎನ್. ಅಮೀನ್ ವಂದಿಸಿದರು.
ನೂತನ ಮಳಿಗೆಯು 2 ಹಂತದ ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡಿರುತ್ತದೆ. ವಿಶಾಲವಾದ ಈ ಆವರಣದಲ್ಲಿ ಏಕಕಾಲದಲ್ಲಿ 64 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ.ಯಶಸ್ಸಿನ ಹಾದಿಯಲ್ಲಿ 1987ರಲ್ಲಿ ಉಡುಪಿಯಲ್ಲಿ 3,500 ಚದರಡಿ ವಿಸ್ತೀರ್ಣದ ಮಳಿಗೆ ಯೊಂದಿಗೆ ಹರ್ಷ ತನ್ನ ವ್ಯವಹಾರವನ್ನು ಆರಂಭಿಸಿತ್ತು. ಕಳೆದ 27 ವರ್ಷಗಳಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 10 ಮಳಿಗೆಗಳನ್ನು ತೆರೆದಿದೆ. ಉಡುಪಿಯಲ್ಲಿ 1,200 ವಸ್ತುಗಳೊಂದಿಗೆ ಆರಂಭವಾದ ಮಳಿಗೆ ಇವತ್ತು 10,000- 12,000 ವಸ್ತುಗಳ ಸಂಗ್ರಹದ ಮಟ್ಟಕ್ಕೇರಿದೆ. ಮಂಗಳೂರಿನಲ್ಲಿ ಮೊದಲ ಮಳಿಗೆ ಕೆ.ಎಸ್. ರಾವ್ ರಸ್ತೆಯಲ್ಲಿ 1992ರಲ್ಲಿ ಆರಂಭವಾಗಿತ್ತು.
ಸಂಸ್ಥೆಯು 60 ಮಂದಿ ಎಂಬಿಎ ಪದವೀಧರರು ಸೇರಿದಂತೆ 550ಕ್ಕೂ ಅಧಿಕ ಮಂದಿಗೆ
ಉದ್ಯೋಗವನ್ನು ಕಲ್ಪಿಸಿಕೊಡುವ ಮೂಲಕ ನೂರಾರು ಕುಟುಂಬಗಳ
ಬದುಕಿಗೆ ಆಧಾರವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

 

 

By suddi9

Leave a Reply

Your email address will not be published. Required fields are marked *