ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ. ರಕ್ಷಿತ್‍ಗೆ `ಮಿ.ಮಂಗಳೂರು ವಿವಿ’
ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಮೂಡುಬಿದರೆಯ ಶ್ರೀ ಧವಲಾ ಕಾಲೇಜಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ಮಂಗಳೂರು ವಿವಿ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಭಾರ ಎತ್ತುವ ಸ್ಪರ್ಧೆ, ಹಾಗೂ ಪುರುಷರ ಉತ್ತಮ ದೇಹಧಾಡ್ರ್ಯ ಸ್ಪರ್ಧೆಯಲ್ಲಿ ಮೂಡುಬಿದರೆಯ ಆಳ್ವಾಸ್ ಕಾಲೇಜಿನ ತಂಡ ಮೂರೂ ವಿಭಾಗದಲ್ಲಿ ಅಗ್ರಸ್ಥಾನದೊಂದಿಗೆ ಕೂಟದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಭಾರ ಎತ್ತುವ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಉಜಿರೆಯ ಮಂಜುನಾಥ್ (ಪುರುಷರ ವಿಭಾಗ) ಎಸ್. ತುಷ್ಮಿತಾ ಎಂ.ವಿ.( ಮಹಿಳೆಯರ ವಿಭಾಗ) ಬೆಸ್ಟ್ ಲಿಫ್ಟರ್ ಪ್ರಶಸ್ತಿ ಪಡೆದಿದ್ದಾರೆ. ಪುರುಷರ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಆಳ್ವಾಸ್‍ನ ರಕ್ಷಿತ್ 32 ಅಂಕಗಳೊಂದಿಗೆ ಮಿ,ಮಂಗಳೂರು ಯೂನಿವರ್ಸಿಟಿ ಪ್ರಶಸ್ತಿ ಪಡೆದಿದ್ದಾರೆ.
mbd_dec29_2 (1)

mbd_dec29_2 (2)ಭಾರ ಎತ್ತುವ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 6 ದಾಖಲೆಗಳು ಸೇರಿ ಒಟ್ಟು 12 ಹೊಸದಾಖಲೆಗಳು ಈ ಕೂಟದಲ್ಲಿ ನಿರ್ಮಾಣವಾಗಿವೆ.
ಪುರುಷರ ವಿಭಾಗದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಅಗ್ರಸ್ಥಾನಿಯಾಗಿ ಪ್ರೊ.ರಿಚಾರ್ಡ್ ರೆಬೆಲ್ಲೋ ರೋಲಿಂಗ್ ಟ್ರೋಫಿನ್ನು ಗೆದ್ದುಕೊಂಡಿದೆ. ಎಸ್.ಡಿ.ಎಂ. ಉಜಿರೆ (ದ್ವಿತೀಯ) ಸೈಂಟ್ ಫಿಲೋಮಿನಾ ಪುತ್ತೂರು (ತೃತೀಯ) ಅತಿಥೇಯ ಧವಲಾ ಕಾಲೇಜು (ಚತುರ್ಥ) ಸ್ಥಾನ ಪಡೆದುಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಅಗ್ರಸ್ಥಾನಿಯಾಗಿ ( 52 ಅಂಕಗಳು) ಶಿರ್ವ ಬ್ಲೋಸಂ ಮ್ಯಾನ್ಶನ್ ಸೆಲೆಸ್ಟಿನ್ ಡಿ ಸೋಜಾ ಟ್ರೋಫಿನ್ನು ಗೆದ್ದುಕೊಂಡಿದೆ. ಎಸ್.ಡಿ.ಎಂ. ಉಜಿರೆ, 32 ಅಂಕಗಳು (ದ್ವಿತೀಯ) ವೆಂಕಟರಮಣ ಮಹಿಳಾ ಕಾಲೇಜು 16ಅಂಕಗಳು (ತೃತೀಯ) ಅತಿಥೇಯ ಧವಲಾ ಕಾಲೇಜು 8 ಅಂಕ (ಚತುರ್ಥ) ಸ್ಥಾನ ಪಡೆದುಕೊಂಡಿದೆ.
ಡಿ.ಜೆ.ವಿ.ವಿ ಸಂಘದ ಕಾರ್ಯದರ್ಶಿ ಎಂ.ಅಭಿಜಿತ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಹಿರಿಯ ನ್ಯಾಯವಾದಿ ನಗರ ನಾರಾಯಣ ಶೆಣೈ, ಮಂಗಳೂರು ವಿವಿ ಸಹಾಯಕ ದೈಶಿ.ನಿರ್ದೇಶಕ ಹರಿದಾಸ ಕೂಳೂರು ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಗಣೇಶ್ ಕಾಮತ್, ಅಂತಾರಾಷ್ಟ್ರೀಯ ವೈಟ್ ಲಿಫ್ಟರ್ ಪುಷ್ಟಪರಾಜ ಹೆಗ್ಡೆ, ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ರವೀಶ್ ಕುಮಾರ್, ದೈ.ಶಿ.ನಿರ್ದೇಶಕ ಶಾಂತಿರಾಜ ಕಂಬಳಿ ಉಪಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಪುತ್ತೂರಿನ ಉದಯ ಕುಮಾರ್, ಆರ್ಥರ್ ಡಿ,ಸೋಜಾ, ವೇಣುಗೋಪಾಲ ಕೃಷ್ಣ ನೋಂಡ, ಆಗಸ್ತನೀಸ್ ಎ.ಡಯಾಸ್, ಹರೀಶ್ ಗೌಡ, ಪುಷ್ಪರಾಜ ಹೆಗ್ಡೆ, ವಿಶ್ವನಾಥ ಗೌಡ, ಎವರೆಸ್ಟ್ ರಾಡ್ರಿಗಸ್ ತೀರ್ಪುಗಾರರಾಗಿ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *