ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ವತಿಯಿಂದ ಡಿ.30 ಬುಧವಾರ ಬೆಳಗ್ಗೆಯಿಂದ ಡಿ.31 ಗುರುವಾರ ಬೆಳಗ್ಗೆವರೆಗೆ ಶ್ರೀ ಭದ್ರಕಾಳಿ ದೇವರ ಸನ್ನಿಧಿಯಲ್ಲಿ 4ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಿತು. ಕೃಷ್ಣ ಭಟ್ ಪುಂಜಾಲ್ಕಟ್ಟೆ ದೀಪ ಬೆಳಗಿಸುವುದರ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಜನೋತ್ಸವದಲ್ಲಿ ಸುಮಾರು 24 ಭಜನಾ ಮಂಡಳಿಗಳು ಭಾಗವಹಿಸಿದ್ದರು.
ಸಂದರ್ಭದಲ್ಲಿ ಭದ್ರಕಾಳಿ ದೇವಸ್ಥಾನದ ದೇವಿಪಾತ್ರಿ ರಮೇಶ್ ಬೆಂಜನಪದವು, ಈಶ್ವರ, ಉಮೇಶ್, ಮಾಜಿ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಕೊಟ್ಟಾರಿ, ಪ್ರೇಮನಾಥ ಶೆಟ್ಟಿ, ಚಂದ್ರಶೇಖರ್ ಸುವರ್ಣ ಉಪಸ್ಥಿತರಿದ್ದರು.


