ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಸಾವಿರ ಕಂಬದ ಬಸದಿಯಲ್ಲಿ ಸಾಮೂಹಿಕ ವೃತೋಪದೇಶ ಭಾನುವಾರ ಜರುಗಿತು. ಮೂಡುಬಿದಿರೆ ಜೈನ ಮಠದ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವೃತೋಪದೇಶ ನೆರವೇರಿಸಿದರು. ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗೆಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಬದುಕನ್ನು ಸಾತ್ವಿಕಗೊಳಿಸುವ ಜೈನಧರ್ಮದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಬೇಕೆಂದರು.

ರಾಷ್ಟ್ರಪ್ರಶಸ್ತಿ ವಿಜೇತೆ ಪಂಚಮಿ ಮಾರೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸಂಪತ್ ಸಾಮ್ರಾಜ್ಯ ಹಾಘೂ ಐಶ್ವರ್ಯ ಜೈನ್ ಅವರನ್ನು ಸನ್ಮಾನಿಸಲಾಯಿತು. ಜೈನ್ ಮಿಲನ್ ಅಧ್ಯಕ್ಷ ನಿರಂಜನ್‍ಕುಮಾರ್‍ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಲಯ ನಿರ್ದೇಶಕ ಮಾಣಿಕ್ಯರಾಜ್ ಅಜ್ರಿ, ಕಾರ್ಯದರ್ಶಿ ಬಿ. ಅಭಯ್ ಕುಮಾರ್ ಉಪಸ್ಥಿತರಿದ್ದರು. ನೇಮಿರಾಜ ಕಾರ್ಯಕ್ರಮ ನಿರೂಪಿಸಿದರು. ಎಸ್.ಪಿ ವಿದ್ಯಾ ಕುಮಾರ್ ವಂದಿಸಿದರು.
