ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು ಗ್ರಾಮದ ಮಣಿಕಂಠಪುರ ಎಂಬಲ್ಲಿ 10ನೇ ವರ್ಷದ ವರ್ಷದ ಭಜನಾ ಸಂಕಿರ್ತನೆಯು. ಜ. 2 ಶನಿವಾರ ಸೂರ್ಯಾಸ್ತದಿಂದ ಮರುದಿನ ಭಾನುವಾರ ಸೂರ್ಯಾಸ್ತದವರೆಗೆ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಆಶೀರ್ವಚನದೊಂದಿಗೆ ಜಿಲ್ಲೆಯ ನಾನಾ ಭಜನಾ ಮಂಡಳಿಗಳಿಂದ ಸಂಕೀರ್ತನೆಯು ನಡೆಯಲಿದೆ.
ಕೃಷ್ಣ ಪೂಜಾರಿ ನಾಸಿಕ್ ಉದ್ಯಮಿ ಅವರು ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಭಾನುವಾರ ಸಂಜೆ ಗಂಟೆ 6-00ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದ್ದು ಸಂಜೆ 7 ಕ್ಕೆ ನಾಗೇಶ್ ಪೊಳಲಿ ಅವರಿಂದ ಭಕ್ತಿಗೀತೆ ಕಾರ್ಯಕ್ರಮ ನಂತರ 8 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದೂಷಿ ವಿದ್ಯಾಶ್ರೀ ರಾಧಕೃಷ್ಣ ಗಾನ ನೃತ್ಯ ಅಕಾಡಮಿ ಕೊಟ್ಟಾರ ಇವರ ಶಿಷೈ ಕು. ತ್ವಿಷಾ ಶೆಟ್ಟಿ ಇವರು ಭರತನಾಟ್ಯ ನಡೆಸಿಕೊಡಲಿದ್ದಾರೆ. ಹಾಗೂ ಧಾರ್ಮಿಕ ಮುಖಂಡರ ಸಮಾಕ್ಷಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9ಕ್ಕೆ ಧಾರ್ಮಿಕ ಕಾರ್ಯಕ್ರಮ. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶೀರ್ವಚನ ನೀಡಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ,ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮಾದುಕೋಡಿ ರೇಖಿ ತಜ್ಙರಾದ ವಿಜಯ ಸುವರ್ಣ ಪೊಳಲಿ ಹಾಗು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ಕೆ.ರಾಮ ಭಟ್ ಪೊಳಲಿ ಉದ್ಯಮಿ ರಘು ಎಲ್ ಶೆಟ್ಟಿ ಮಂಬಯಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ , ಬೆಳ್ಳೂರು ಕುಕ್ಕಾಜೆ ಕೃಷ್ಣ ಪೂಜಾರಿ ನಾಸಿಕ್ ಉದ್ಯಮಿ ಹಾಗೂ ಮಣಿಕಂಠ ಸೇವಾ ಸಮಿತಿ ಅಧ್ಯಕ್ಷ ಮಹಾಬಲ ಸುವರ್ಣಉಪಸ್ಥಿತರಿರುವರು. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಯಕ್ಷಕಲಾ ಸಂಘ ವರಕೋಡಿ ಇದರ ಬಾಲ ಕಲಾವಿದರಿಂದ ದೇವದಾಸ ಅರ್ಕುಳ ಅವರ ನಿರ್ದೇಶನದಲ್ಲಿ “ಸ್ವಯಂಪ್ರಭ ಪರಿಣಯ” ಎಂಬ ಯಕ್ಷಗಾನ ನಡೆಯಲಿದೆ. ಎಂದು ಮಣಿಕಂಠ ಭಜನಾ ಮಂಡಳಿಯ ಪ್ರಕಟನೆ ತಿಳಿಸಿದೆ
