ಮೂಡುಬಿದಿರೆ: ವಿನೂತನ ರೀತಿಯಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ದಿನದ ಎರಡನೇ ಕಾರ್ಯಕ್ರಮವನ್ನು ನೀಡಿದ ಡಾ.ಎಸ್.ಪಿ.ಬಿ ಬಾಲಸುಬ್ರಹ್ಮಣ್ಯಂ
ಎಸ್‍ಪಿಬಿ ಕಂಠಸಿರಿಯಲ್ಲಿ ಕನ್ನಡ, ತುಳು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳ ಹಾಡು ಪ್ರೇಕ್ಷಕರನ್ನು ಕಾಡಿದಂತೂ ನಿಜ.
ತುಳು ಹಾಡಿದ `ಎಸ್‍ಪಿಬಿ’
`ಮೋಕೆದ ಸಿಂಗಾರಿ…ಉಂತುದೆ ವಯ್ಯಾರಿ… ಯಾನೇ ಮೂಲು ಕಾತೊಂದುಲ್ಲೆ ಮದತೇ ಪೋಪನಾ..” ಎಂಬ ತುಳು ಹಾಡು ಖ್ಯಾತ ಗಾಯಕ ಪದ್ಮಶ್ರೀ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಕೇಳಿಬಂತು.
`ಹೊಂಬಿಸಿಲು’ ಚಲನಚಿತ್ರದ `ಜೀವ ವೀಣೆ ನೀನು ಮಿಡಿತದ ಸಂಗೀತ’ ಎಂಬ ಹಾಡಿನೊಂದಿಗೆ ರಸಮಂಜರಿಯನ್ನು ಆರಂಭಿಸಿದ ಎಸ್‍ಪಿಬಿ ಅವರು `ಗೀತಾ’ ಚಿತ್ರದ `ಜೊತೆಯಲಿ ಜೊತೆ ಜೊತೆಯಲಿ’, ಶ್ರೀ ಮಂಜುನಾಥ ಚಿತ್ರದ `ಈ ಪಾದ ಪುಣ್ಯ ಪಾದ’, ರೋಜಾ ಚಿತ್ರದ ‘ರೋಜಾ ಜಾನೆ ಮನ್’, ಅಂಜಲಿ ಚಿತ್ರದ `ಅಂಜಲಿ ಅಂಜಲಿ ಅಂಜಲಿ’, ದೇವರ ದುಡ್ಡು ಚಿತ್ರದ “ತಾರಿ ಕೇರಿ ಏರಿ ಮೇಲೆ’, ಪಲ್ಲವಿ ಅನುಪಲ್ಲವಿ ಚಿತ್ರದ `ನಗುವಾ ನಯನಾ ಮಧುರ ಮೌನ’,ಗೀತಾ ಚಿತ್ರದ `ಹಾಡು ಸಂತೋಷಕ್ಕೆ’, “ತೇರಿ ಪಾಯಲ್ ಮೇರಿ ಗೀತ್” ಶ್ರೀ ವೆಂಕಟೇಶ ಚಿತ್ರದ `ಪವಾಡಿಸು ಪರಮಾತ್ಮ’ ಹಾಗೂ ಆಳ್ವಾಸ್ ವಿರಾಸತ್‍ನ ರೂವಾರಿ ಡಾ.ಎಂ.ಮೋಹನ ಆಳ್ವರ ಕೋರಿಕೆಯ ಮೇರೆಗೆ ಶಂಕರಾಭರಣ ಚಲನ ಚಿತ್ರದ `ಶಂಕರಾ ನಾದ ಶರೀರ’ ಎಂಬ ಹಾಡನ್ನು ಹಾಡಿದರು. ಇದಲ್ಲದೆ ತುಳು ನಾಡಿನಲ್ಲಿ ನಡೆದ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ತುಳು ಹಾಡನ್ನು ಹಾಡುವ ಮೂಲಕ ಕಲಾ ಸಭಿಕರನ್ನು ಮನ ಸೆಳೆದರು.

25mood SPB (1)

25mood SPB (2)

25mood SPB (4)
ಕನ್ನಡದ ಖ್ಯಾತ ಚಲನಚಿತ್ರಗಳಾದ ನೆನಪಿರಲಿ ಯ”ಕೂರಕ್ ಕುಕ್ರಲ್ಲಿಕೆರೆ” ಆಟೋ ರಾಜದ “ನಗುವಾ ಗುಲಾಬಿ ಹೂವೇ”, ಮಾನಸ ಸರೋವರದ ” ನೀನೆ ಸಾಕಿದ ಗಿಣಿ” ಇಂದ್ರಜಿತ್ ಚಿತ್ರದ “ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ” “ಬೆಳದಿಂಗಳಿಂದು ಹೆಣ್ಣಾಗಿ ಬಂದು” ಮುಂತಾದ ಹಾಡುಗಳ ತುಣುಕುಗಳನ್ನು ಹಾಡಿ ವಿವೇಕಾನಂದ ನಗರದ ಲ್ಲಿ ಸೇರಿದ್ದ ಸಂಗೀತಾಸಕ್ತರ ಗಮನ ಸೆಳೆದರು.
ಸಂಗೀತ ರಸಮಂಜರಿಯ ಈ ಕಾರ್ಯಕ್ರಮವನ್ನು ಒಂದು ಮುಕ್ಕಾಲು ಗಂಟೆಗಳ ಕಾಲ ನಡೆಸಿಕೊಟ್ಟ ಎಸ್.ಪಿ.ಬಿ ಅವರಿಗೆ ಅರ್ಚನಾ ಉಡುಪ ಮತ್ತು ಪೂರ್ಣಿಮಾ ಸಹಕರಿಸಿದರು. ಶ್ರೀನಿವಾಸ, ರಮೇಶ್ಚಂದ್ರ, ಗೀತೆಗಳನ್ನು ಹಾಡಿದರು. ಉಳಿದಂತೆ ಅಶ್ವಿನಿ, ಶೃತಿ ಕಾರ್ತಿಕ್ ಮತ್ತು ವೇಣುಗೋಪಾಲ್ ಅವರು ಹಿಮ್ಮೇಳನದಲ್ಲಿ ಸಹಕರಿಸಿದರು.

 

By suddi9

Leave a Reply

Your email address will not be published. Required fields are marked *