ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ಕ್ರಿಸ್ಮಸ್-2015 ಅನ್ನು ಆಚರಿಸಲಾಯಿತು.
23mood Alvas Christmas (1)

23mood Alvas Christmas (2)

23mood Alvas Christmas (3)

23mood Alvas Christmas (5)

23mood Alvas Christmas (6)
ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜ ಕ್ರಿಸ್ಮಸ್ ಸಂದೇಶ ನೀಡಿ, ಶಾಂತಿಧೂತ ಯೇಸು ನಮ್ಮ ಹೃದಯದಲ್ಲಿದ್ದರೆ, ಆತನ ಪ್ರೀತಿ,ಶಾಂತಿಯ ಸಂದೇಶ ಮನಸ್ಸನ್ನು ತಟ್ಟಲು ಸಾಧ್ಯ. ಜಾತಿ, ಧರ್ಮಕೋಸ್ಕರ ದ್ವೇಷ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಕ್ರಿಸ್ತನ ಸಂದೇಶಗಳನ್ನು ಅಳವಡಿಸಿದರೆ ಪ್ರೀತಿ, ಶಾಂತಿ ನೆಲೆಯೂರಿ, ಸಾಮರಸ್ಯದ ಸಮಾಜ ಸೃಷ್ಠಿಯಾಗುತ್ತದೆ. ಸಾಮಾಜಿಕ ಶಾಂತಿ ಪ್ರೀತಿಯೇ ಕ್ರಿಸ್ಮಸ್ ಹಬ್ಬದ ಸಂದೇಶ ನುಡಿದರು.
ಮೂಡುಬಿದಿರೆ ಚರ್ಚ್ನ ಧರ್ಮಗುರು ರೆ.ಫಾ ಆಸ್ಟಿನ್ ಪೀಟರ್ ಪೆರಿಸ್ ಕ್ರಿಸ್ಮಸ್ ಸಂದೇಶ ನೀಡಿದರು.ಮೂಲ್ಕಿ ರೆ.ಫಾ. ಎಫ್.ಎಕ್ಸ್. ಗೋಮ್ಸ್, ಅಲಂಗಾರು ಚರ್ಚ್ನ ಧರ್ಮಗುರು ಬೇಸಿಲ್ ವಾಸ್, ಕ್ರೈಸ್ತ ಸುಧೀರ್ ಪ್ರಕಾಶ್, ಪ್ಯಾಸ್ಟರ್ ಅಭಿ ಅಬ್ರಹಾಂ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸ್ಟಾನಿ ಲೋಬೋ ವಂದಿಸಿದರು.

By Suddi9

Leave a Reply

Your email address will not be published. Required fields are marked *