ಮೂಡುಬಿದರೆ: ಈಜಲೆಂದು ಸ್ನೇಹಿತರೊಂದಿಗೆ ತೆರಳಿದ್ದ ಮೂಡುಬಿದರೆ ಕಾಲೇಜೊಂದರ ವಿದ್ಯಾರ್ಥಿ ಬೆಳುವಾಯಿಯ ಮಠದಕೆರೆಯಲ್ಲಿ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದಾನೆ
IMG_6015

mbd_dec20_3 (1)

mbd_dec20_3 (2)
ಮೂಡುಬಿದರೆ ಕೋಟೆಬಾಗಿಲು ಮುರಮೇಲು ನಿವಾಸಿ ಸ್ಥಳೀಯ ಬಿಜೆಪಿ ಮುಖಂಡ ಮಂಜುನಾಥರೈ ಅವರ ಪುತ್ರ, ಮಹಾವೀರ ಕಾಲೇಜಿನ ಪ್ರಥಮ ಬಿ.ಕಾಂ.ವಿದ್ಯಾರ್ಥಿ ಆಕಾಶ್ ರೈ (17) ಮೃತಪಟ್ಟ ವಿದ್ಯಾರ್ಥಿ . ಆಕಾಶ್ ರೈ ತನ್ನ ಸ್ನೇಹಿತರೊಂದಿಗೆ ಈಜಲೆಂದು ಮಠದಕೆರೆಗೆ ತೆರಳಿದ್ದರು.ಈಜುವ ವೇಳೆ ಆಕಾಶ್ ರೈ ಮುಳುಗಿದ್ದು ಇತರರುರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವೆನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿಯ ನೂರಾರು ಕಾರ್ಯಕರ್ತರು ಮೃತದೇಹವಿರಿಸಿದ್ದ ಮೂಡುಬಿದರೆ ಸರ್ಕಾರಿ ಆಸ್ಪತ್ರೆಯಎದುರು ಜಮಾಯಿಸಿದ್ದರು. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *