ಪೊಳಲಿ: ಕೃಷಿ ಬದುಕಿನ ಯುವ ಜನರಿಗೇ ಆಶಕ್ತಿ ಕ್ಷೀಣಿಸುತ್ತಿದೆ ಈ ದಿಸೆಯಲ್ಲಿ ಕೃಷಿಯಲ್ಲಿ ಒಲವು ಮಾಡಿಸುವ ಸಲುವಾಗಿ ಕೆಸರುಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ಉಳುವ ಪಸಲು ಬೆಳೆಸುವ ವಿವಿಧ ಮಾಹಿತಿಯನ್ನು ಪ್ರಾಯೋಗಿಕವಾಗಿ ವಾಮಂಜೂರಿನ ಸೈಂಟ್ ರೇಮಂಡ್ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.
17 vp kesarugade

17 vp kesarugade 1

17 vp kesarugade 2

17 vp kesarugade 3

17 vp kesarugade 4

17 vp kesarugade 5
ನಂತರ ಪಲ್ಲಿಪಾಡಿಯ ಚಿನ್ನಮೊಗರುಗದ್ದೆಯಲ್ಲಿ ಸೈಂಟ್ ರೇಮಂಡ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕೆಸರು ಗದ್ದೆ ಆಟೋಟಗಳನ್ನು ನಡೆಸಿ ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾದರು.
ಪ್ರಿನ್ಸಿಪಾಲ್ ಡಾ. ಸೆಲಿನ್ ವಾಸ್ ಹಾಗೂ ಎನ್ಎಸ್ ಎಸ್ನಕಾರ್ಯಕ್ರಮಧಿಕಾರಿ ಡೊಂಬಯ್ಯ ಇಡ್ಕಿದು ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಪಲ್ಲಿಪಾಡಿ ಚಿನ್ನಮೊಗರು ಗದ್ದೆಯಲ್ಲಿ ಮೂರು ಕಾಲು ಓಟ ಕಬಡ್ಡಿ ರಿಲೇ, ನಿಧಿ ಹುಡುಕಾಟ, ನೂರು ಮೀಟರ್ ಓಟ ನಡೆಸಿ ಕೃಷಿಕರ ಪ್ರಶಂಸೆ ಗಳಿಸಿದರು.

ನಗರದ ಅಣತಿದೂರದಲ್ಲಿರುವ ಸೈಂಟ್ ರೇಮಂಡ್ ಕಾಲೇಜು ಇದರ ವಾರ್ಷಿಕ ವಿಶೇಷ ಶಿಬಿರದಂಗವಾಗಿ ನಡೆದ ಈ ಕಾರ್ರಕ್ರಮವನ್ನು ನೇಜಿ ನೆಡುವ ಮೂಲಕ ಶಂಕರ ಆಳ್ವ ಚಾಲನೆ ನೀಡಿದರು. ಕೃಷಿಕರಾದ ಆನಂದ ಆಳ್ವ, ಬಾಲಚಂದ್ರ ಶೆಟ್ಟಿ ಮೊದಲಾದವರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ತರಬೇತಿ ಪಡೆದು ನೇಜಿ ನಾಟಿ ಮಾಡಿದರು.ರೈತರ ಆತ್ಮಹತ್ಯೆ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಅವರಿಗೆ ಮಾನಸಿಕ ದೈರ್ಯ ತುಂಬುವ ಕೆಲಸ ಮಾಡಿದ್ದು ಶ್ಲಾಘನೀಯವಾದುದಾಗಿದೆ.

ಚಿನ್ನದ ಮೊಗರುವಿಗೆ ಅದರದೆ ಆದ ಪ್ರಾಮುಖ್ಯತೆ ಇದೆ. ಅಲ್ಲಿ ಚಿನ್ನದಂಥ ಫಸಲು ಬರುವುದರಿಂದ ಅದಕ್ಕೆ ಹಿರಿಯರಾದ ಪ್ರೇಮನಂದ ಆಳ್ವ ಹಾಗೂ ತಿಮ್ಮಣ್ಣ ಆಳ್ವ ಅವರು ಚಿನ್ನದ ಮೊಗರು ಎಂದೆ ಗದ್ದೆಗೆ ನಾಮಕರಣ ಮಾಡಿದ್ದರು.ಅದನ್ನು ಈಗ ಪ್ರಗತಿಪರ ಕೃಷಿಕ ಆನಂದಬಂಗೇರಾ ನೋಡಿಕೊಳ್ಳುತ್ತಿದ್ದಾರೆ.ಅವರದು ಕೃಷಿಯಲ್ಲಿ ಭವಣೆಯ ಬದುಕಾದರೂ ಉತ್ಸಾಹ ಎಂದು ಮುಖದಲ್ಲಿ ಇದೆ.ಸಹಾಯಹಸ್ತ ಚಾಚಿ ಬರುವ ಕೈಗಳಿಗೆ ಆನಂದರು ದಾನಿಗಳಾಗಿ ಕಾಣಸಿಗುತ್ತಾರೆ.

ವಿವಿಯಲ್ಲಿ ಪ್ರಾಯೋಗಿಕವಾಗಿ ಕೃಷಿ ಪಠ್ಯ ಅಳವಡಿಸಿ ಅವುಗಳಿಗೆ ಮಹತ್ವ ನೀಡುವ ಕೆಲಸ ಮಾಡಬೇಕು.ಕೃಷಿ ಬಗೆಗೆ ಯುವಕರು ಆಸಕ್ತಿಯನ್ನು ಬೆಳೆಸಿಕೊಂಡು ಅಳಿವಿನಂಚಿನಲ್ಲಿರುವ ಕೃಷಿಗೆ ಮರುಪೂರಣ ನೀಡುವ ಕೆಲಸ ನಡೆಸಬೇಕಾಗಿದೆ.

By suddi9

Leave a Reply

Your email address will not be published. Required fields are marked *