ಕೈಕಂಬ: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸೈಂಟ್ ರೇಮಂಡ್ ಕಾಲೇಜು ವಾಮಂಜೂರು ಇದರ ವಾರ್ಷಿಕ ವಿಶೇಷ ಶಿಬಿರದಲ್ಲಿ ನಾಳೆ ಪಲ್ಲಿಪಾಡಿಯ ಪ್ರಗತಿಪರ ಕೃಷಿಕರು ಆದ ಆನಂದರವರ ಕೆಸರು ಗದ್ದೆಯಲ್ಲಿ ವಿವಿಧ ಕೆಸರು ಗದ್ದೆ ಸ್ಪರ್ಧೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಚಂದ್ರಹಾಸ, ವಿದ್ಯಶ್ರೀ, ಬಾಲಚಂದ್ರ ಶೆಟ್ಟಿ, ವಿಜಯ, ಗುಣಾಪಾಲ ಶೆಟ್ಟಿ, ಜಗದೀಶ್ ಕರಿಯಂಗಳ, ಮಹಮ್ಮದ್ ಕುಂಡಿಕುಮೇರು, ಸಯ್ಯದ್ ಆಲಿ, ಅನೀಫ್ ಭಾಗವಹಿಸಲ್ಲಿದ್ದಾರೆ.
