ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವವು ಸಂಭ್ರಮ ಸಡಗರದಿಂದ ಗುರುವಾರ ನಡೆಯಿತು.
ಆರಂಭದಲ್ಲಿ ದೇವರಿಗೆ ಉಷಾ ಪೂಜೆ, ಪಂಚಾಮೃತ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಸ್ಕಂದಯಾಗ, ದೇವರ ಬಲಿ ಉತ್ಸವ ಮತ್ತು ಇಲ್ಲಿನ ನಾಗಬ್ರಹ್ಮ ಸುಬ್ರಹ್ಮಣ್ಯ ಭಜನಾ ಮಂಡಳಿ ಸದಸ್ಯರ ಭಜನೆಯೊಂದಿಗೆ ಆಕರ್ಷಕ ಪಲ್ಲಕಿ ಉತ್ಸವ ಮೂಲಕ ವಾರ್ಷಿಕ ಷಷ್ಠಿ ಮಹೋತ್ಸವ ನಡೆಯಿತು.
ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ತಾಲ್ಲೂಕಿನ ವಿವಿಧೆಡೆಯಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ರಾತ್ರಿ ಪರಿವಾರ ದೈವ ಮಹಿಸಂದಾಯ, ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಿತು.
ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪ್ರಮುಖರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಹರಿಕೃಷ್ಣ ಬಂಟ್ವಾಳ್, ಕೆ.ಮಾಯಿಲಪ್ಪ ಸಾಲ್ಯಾನ್, ಎಂ.ತುಂಗಪ್ಪ ಬಂಗೇರ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ದೇವಳದ ಅನುವಂಶಿಕ ಮೊಕ್ತೇಸರ ಕೆ.ಸುಂದರ ರಾವ್, ಅರ್ಚಕ ಎಸ್. ನಾಗೇಶ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಳಿನಿ ಬಿ.ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷರಾದ ಜಿ.ದಾಮೋದರ ಬಂಗೇರ, ಇಂದಿರಾ ಮಧುಕರ ಬಂಗೇರ, ಹರೀಶ ಆಚಾರ್ಯ, ಪ್ರಭಾರ ಆಡಳಿತಾಧಿಕಾರಿ ಪಿಡಿಒ ವೆಂಕಟೇಶ್, ಉತ್ಸವ ಸಮಿತಿ ಗೌರವಾಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಅಧ್ಯಕ್ಷ ಸಂತೋಷ್ ಕುಮಾರ್ ಚೌಟ, ಪದಾಧಿಕಾರಿಗಳಾದ ಮೋಹನ್ ಕೆ.ಶ್ರೀಯಾನ್ ಕೈತ್ರೋಡಿ, ರವೀಂದ್ರ ಪೂಜಾರಿ, ರಾಜೇಶ್ ಗೋವಿಂದಬೆಟ್ಟ, ಶರತ್ ಕುಮಾರ್, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ಪ್ರಕಾಶ್ ಕುಮಾರ್ ಜೈನ್ ಬೊಲ್ಲೋಡಿ, ಸಂತೋಷ್ ಕುಮಾರ್ ಬೆಟ್ಟು, ಸುರೇಂದ್ರ ಅಣ್ಣಳಿಕೆ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಶಾಂತ್ ಭಟ್ ಸಜಂಕಬೆಟ್ಟು ಮತ್ತಿತರರು ಪಾಲ್ಗೊಂಡಿದ್ದರು.


