ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡಮಾಡುವ 2015ನೇ ಸಾಲಿನ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿಗೆ ಪದ್ಮಶ್ರೀ ಡಾ. ಮನು ಪರೇಖ್ ಆಯ್ಕೆಯಾಗಿದ್ದಾರೆ.
ಡಿ.27ರಂದು ಸಂಜೆ 5.50ರ ವೇಳೆಗೆ ನಡೆಯುವ ಆಳ್ವಾಸ್ ವಿರಾಸತ್-2015ರ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಡಾ. ಮನು ಪರೇಖ್ಗೆ ಕುರಿತು:
1939ರಲ್ಲಿ ಗುಜರಾತ್ನ ಅಹಮಾದಾಬಾದ್ನಲ್ಲಿ ಜನಿಸಿದ ಪದ್ಮಶ್ರೀ ಡಾ. ಮನು ಪರೇಖ್ರವರು ತಮ್ಮ ಆರಂಭಿಕ ಕಲಾಶಿಕ್ಷಣವನ್ನು ಮುಕುಂದ್ ಶ್ರಾಪ್ ಬಳಿ ಪಡೆದಿದ್ದಾರೆ. ಬಳಿಕ 1962ರಲ್ಲಿ ಮುಂಬಾಯಿಯ ಸರ್ ಜಮ್ಸೇಟ್ಜೀ ಜೀಜಾಭಾಯಿ ಕಲಾ ಶಾಲೆಯಲ್ಲಿ ಕಲಾ ಪದವಿಯನ್ನು ಪಡೆದರು. ರಂಗ ಭೂಮಿಯ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಒಂದು ವರ್ಷ ನಟನಾಗಿಯೂ, ವೇದಿಕೆ ವಿನ್ಯಾಸಕಾರನಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಎರಡು ವರ್ಷಗಳ ಕಾಲ ಮುಂಬಾಯಿಯ ವೀವಸರ್್ ಸೇವಾ ಕೇಂದ್ರದಲ್ಲಿ ಕಲಾವಿನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ ದೆಹಲಿಯ ಕರಕುಶಲ ಹಾಗೂ ಕೈಮಗ್ಗ ರಪ್ತು ನಿಗಮದಲ್ಲಿ ವಿನ್ಯಾಸ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಆ ಬಳಿಕ ವೃತ್ತಿಯನ್ನು ತೊರೆದು ಸ್ವತಂತ್ರ ಕಲಾವಿದರಾಗಿ ಮುಂದುವರೆದರು.
ಇವರು ಆಧುನಿಕ ಕಲೆಯಲ್ಲಿ ವಿಶೇಷ ಪರಿಣಿತರಾಗಿದ್ದು ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ ಹಾಗೂ ವಾಷಿಂಗ್ಟನ್ ಡಿ.ಸಿ. ನ್ಯೂಯಾಕರ್್, ಲಂಡನ್, ಇಟಲಿ, ಡೆನ್ಮಾಕರ್್ ಸೇರಿದಂತೆ ಹಲವಾರು ಬಾರಿ ದೇಶ ವಿದೇಶಗಳಲ್ಲಿ ತಮ್ಮ ಕಲಾಕೃತಿಗಳ ಹಲವಾರು ಏಕ ವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ ತಮ್ಮ ಕಲಾಕೃತಿಗಳನ್ನು ಹರಾಜು ಮಾಡಿ ಬಂದ ಹಣವನ್ನು ಹೆಲ್ಪೇಜ್ ಇಂಡಿಯಾಗೆ ನೀಡಿದ್ದಾರೆ.
ಎರಡು ಬಾರಿ ಭಿಲರ್ಾ ಕಲೆ ಮತ್ತು ಸಂಸ್ಕೃತಿ ಇಲಾಖಾ ಪ್ರಶಸ್ತಿ, ಅಖಿಲ ಭಾರತ ಲಲಿತಾ ಕಲೆ ಮತ್ತು ಕರಕುಶಲಾ ಪ್ರಶಸ್ತಿ, ರಾಷ್ಟ್ರೀಯ ಕಲಾ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಬೆಳ್ಳಿ ಪದಕ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದು, 1991ರಲ್ಲಿ ಭಾರತ ಸರಕಾರವು ಕೊಡಮಾಡುವ ನಾಗರಿಕ ಸಮ್ಮಾನ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈಗಲೂ ಅತ್ಯಂತ ಕ್ರಿಯಾಶೀಲ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಪಸ್ತುತ ತಮ್ಮ ಪತ್ನಿ ಮಾದ್ವಿಯವರೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಾರೆ.
