ಮೂಡುಬಿದರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪ.ಪೂ. ಕಾಲೇಜಿನ ಸಹಭಾಗಿತ್ವದಲ್ಲಿ ನಾಟ್ಯ ಚಂದ್ರಿಕಾ ಕುಂದಾಪುರ ಸಂಸ್ಥೆ ಅಂಬಲಪಾಡಿ ದೇವಸ್ಥಾನದಲ್ಲಿ ಆಯೋಜಿಸಿದ ಒಂದು ದಿನದ ಉಚಿತ ಸಂಗೀತ -ನೃತ್ಯ-ಪ್ರದರ್ಶನ ಕಾರ್ಯಾಗಾರ ಭಾನುವಾರ ಜರುಗಿತು.
mbd_dec15_1 (1)

mbd_dec15_1 (2)

mbd_dec15_1 (3)ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ ಕಾರ್ಯಾಗಾರವನ್ನು ಉದ್ಘಾಟಿಸಿದರು. ನೃತ್ಯ ಗುರು ಲಕ್ಷ್ಮೀ ಗುರುರಾಜ್, ಉದ್ಯಮಿ ರಂಜನ್ ಕಲ್ಕೂರ ಅತಿಥಿಗಳಾಗಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಕ್ಸಲೆಂಟ್ ಅಧ್ಯಕ್ಷ ಯುವರಾಜ ಜೈನ್ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಎ.ಲೋಕೇಶ್ ಆಚಾರ್ಯ ಅತಿಥಿಯಾಗಿದ್ದರು. ಶಿಬಿರ ನಿರ್ದೇಶಕ ಕೆ.ವಿ.ರಮಣ್ (ಸಂಗೀತ ಗಣಿತ), ನೃತ್ಯ ವಿದುಷಿ ಮೋನಿಕಾ ರಾವ್ ಮತ್ತು ಐಶ್ವರ್ಯಾ ಎಸ್. (ನೃತ್ಯ ಗಣಿತ), ಪ್ರೊ.ಜಯಶಂಕರ್ (ವೇದ ಗಣಿತ), ಅಯನಾ ವಿ.ರಮಣ್ (ನಾಟ್ಯಾಯನ) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ನಾಟ್ಯಾಯನ ಮೂಡುಬಿದರೆ ಸೇರಿದಂತೆ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ನೃತ್ಯ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ – ಕಾಲೇಜು – ವಿದ್ಯಾರ್ಥಿನಿಲಯಗಳ 136 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ಕಮಲಾಕ್ಷ ಆಚಾರ್ ಅವಲೋಕನ ನಡೆಸಿದರು. ಈಶ್ವರೀ ರಾಮಕೃಷ್ಣ ಭಟ್ ಮತ್ತು ಸೌಮ್ಯ ಕೆ. ನಿರೂಪಿಸಿದರು. ಎಂ.ಐ.ಟಿ. ಮಣಿಪಾಲದ ಸ್ನಾತಕೋತ್ತರ ಗಣಿತ ವಿದ್ಯಾರ್ಥಿನಿಯರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *