ಬಜ್ಪೆ: ಬಜ್ಪೆ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 21.22 ಲಕ್ಷ ರೂ. ಮೌಲ್ಯದ 824 ಗ್ರಾಂ. ಚಿನ್ನವನ್ನು ಜಫ್ತಿಗೊಳಸಿದ್ದಾರೆ.
ಪ್ರಯಾಣಿಕನೋರ್ವ ಚಿನ್ನವನ್ನು ತೆಳುವಾದ ಪಟ್ಟಿಯನ್ನಾಗಿ ಪರಿವರ್ತಿಸಿ ಅದನ್ನು ಪರ್ಸಲ್ಲಿಟ್ಟು ಪ್ರಯಾಣಿಸುತ್ತಿದ್ದ. ಮತ್ತೊಬ್ಬ ಚಿನ್ನವನ್ನು ವಿಮಾನದ ಸೀಟಿನಡಿಯಲ್ಲಿ ಬಚ್ಚಿಟ್ಟಿದ್ದ. ಈ ಪೈಕಿ ಒಬ್ಬಾತ ಇದನ್ನು ದುಬೈನಿಂದ ಬಜ್ಪೆಗೆ ಬಂದಿದ್ದರೆ, ಮತ್ತೊಬ್ಬ ದುಬೈಯಿಂದ ಮುಂಬೈಗೆ ಆಗಮಿಸಿ ಬಳಿಕ ಬಜ್ಪೆಗೆ ಆಗಮಿಸಿದ ಯಾನಿಯಲ್ಲಿ ಪತ್ತೆಹಚ್ಚಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪ್ಯೋರಯಾಣಿಕನೊರ್ವ ಚಿನ್ನವನ್ನು ಮೊಬೈಲ್ ಬ್ಯಾಟರಿಯಾಗಿ ಪರಿವರ್ತಿಸಿ ಅದನ್ನು ಮೊಬೈಲ್ನಲ್ಲಿಟ್ಟು ತಂದಿದ್ದ. ಅದೇ ರೀತಿ ಮಹಿಳೆಯೋರ್ವಳಿಂದ ಎರಡು ಚಿನ್ನದ ಗಟ್ಟಿಯನ್ನು ವಶಪಡಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ತನ್ನ ಕಾರ್ಯಚರಣೆಯನ್ನು ಚುರುಕುಗೊಳಿಸಿರುವುದರ ಫಲವಾಗಿ ಚಿನ್ನದ ಬೇಟೆ ಮುಂದರುವರಿಯುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
