ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ಬಂಟ್ವಾಳ ತಾಲೂಕು ವಿಟ್ಲ ವಲಯ ಇವರಿಂದ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನಡೆಯುವ `ಸಮಗ್ರ ತೋಟಗಾರಿಕಾ ಬೆಳೆಗಳು ಹಾಗೂ ಅದರ ನಿರ್ವಹಣೆ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ’ ಕುರಿತು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ  ಡಿ 13 ರಂದು  ಭಾನುವಾರ ಜರಗಿತು.
SHV_6879
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ವಿಜೇತ ಕೃಷಿಕ ಸುರೇಶ್ ಗೌಡ ಪುಣಚ ಮಾಡಿದರು. ಅಧ್ಯಕ್ಷತೆಯನ್ನು ಇಡ್ಕಿದು ಕೋಲ್ಪೆ ಶ್ರೀ ಶಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ರಾಜಾರಮ್ ಶೆಟ್ಟಿ ಕೋಳ್ಪೆಗುತ್ತು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಶ್ರೀ ಕ್ಷೇ ಧ ಗ್ರಾ ಯೋ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ ಕ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ, ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ವಿಟ್ಲ ವಲಯಾಧ್ಯಕ್ಷ ರಮೇಶ್ ಪೂಜಾರಿ ಇವರು ಭಾಗವಹಿಸಿದ್ದರು. ವಿಟ್ಲ ಸಿ ಪಿ ಸಿ ಆರ್ ಐ ಹಿರಿಯ ತಾಂತ್ರಿಕ ಅಧಿಕಾರಿ ಪುರಂದರ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ಜನಾರ್ಧನ ಸ್ವಾಗತಿಸಿದರು. ಜನಾರ್ಧನ ಪದ್ಮಶಾಲಿ ವಂದಿಸಿದರು. ಕೃಷಿ ಮೇಲ್ವಿಚಾರಕ ನಾರಾಯಣ ಕಾರ್ಯಕ್ರಮ ನಿರ್ವಹಿಸಿ ಮಾಹಿತಿ ನೀಡಿದರು.

By suddi9

Leave a Reply

Your email address will not be published. Required fields are marked *