ಮೂಡುಬಿದರೆ: ಪೂರ್ವಿಕರ ಪರಿಶ್ರಮದ ಫಲವಾಗಿ ಸಂಸ್ಕಾರಯುತ ಜೀವನ ಹಾಗೂ ದೇವರ ಆರಾಧನೆಯಲ್ಲಿ ಬದುಕಿ ಕಂಡುಕೊಳ್ಳಬಹುದಾದ ಜೀವನಕ್ರಮ ಬ್ರಾಹ್ಮಣ ಲಭಿಸಿದೆ.  ದೇಶದಲ್ಲಿ ಕೇವಲ 6 ಶೇ.ಬ್ರಾಹ್ಮಣರಿದ್ದರೂ, ಒಗ್ಗಟ್ಟು, ಸಂಸ್ಕಾರಯುತ ಜೀವನದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು. ಸಾಂಘಿಕ ಹೋರಾಟದಿಂದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಸರ್ಕಾರದ ಯಾವುದೇ ನೀತಿ ನಿಯಮಗಳನ್ನು ಸಾತ್ವಿಕವಾಗಿ ಹಿಮ್ಮೆಟ್ಟಿಸಬಹುದು. ಜಗತ್ತಿನ ಬ್ರಾಹ್ಮಣ ವರ್ಗವೆಲ್ಲ ಸೇರಿ `ವಿಶ್ವ ಬ್ರಾಹ್ಮಣ ಸಂಘ’ ಸ್ಥಾಪಿಸುವಂತಾಗಬೇಕು ಎಂದು ಶ್ರೀಕ್ಷೇತ್ರ ಕಟೀಲಿನ ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶಯ ವ್ಯಕ್ತಪಡಿಸಿದರು.

mbd_dec10_7
ಮೂಡುಬಿದರೆ ವಲಯದ 37ಗ್ರಾಮಗಳ 1250 ಬ್ರಾಹ್ಮಣ ಕುಟುಂಬದ ಮಾಹಿತಿಯೊಳಗೊಂಡ ಎಸ್.ಯು ಪುತ್ತಿಗೆ ರಚಿಸಿದ `ಬ್ರಾಹ್ಮ ಪುಷ್ಪ ಗುಚ್ಛ’ ಮಹಾಕೃತಿಯ ಬಿಡುಗಡೆ ಸಮಾರಂಭದಲ್ಲಿ ಆಶೀವರ್ಚನ ನೀಡಿದರು. ಅಲಂಗಾರಿನ ಸುಧರ್ಮ  ಚ್ಯಾರಿಟೇಬಲ್ ಟ್ರಸ್ಟ್ಮ ಆಶ್ರಯದಲ್ಲಿ ಅಲಂಗಾರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಧರ್ಮದರ್ಶಿ  ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವೆ.ಮೂ. ಈಶ್ವರ ಭಟ್, ಶ್ರೀಕ್ಷೇತ್ರ ಪುತ್ತಿಗೆಯ ವೆ.ಮೂ ಅಡಿಗಳ್ ಶ್ರೀನಿವಾಸ, ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ, ಅರ್ಥಧಾರಿ ಬಿ.ಎಸ್.ಓಕುಣ್ಣಾಯ, ಮೂಡುಬಿದರೆ ಶ್ರೀಮಹಾವೀರ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ದೀಕ್ಷಿತ್ ಉಪಸ್ಥಿತರಿದ್ದರು.
ಉದ್ಯಮಿ ಕೆ.ಶ್ರೀಪತಿ ಭಟ್ ಸ್ವಾಗತಿಸಿದರು. ದೇವಾನಂದ ಭಟ್ ಬೆಳುವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಎನ್.ಸದಾಶಿವ ರಾವ್ ವಂದಿಸಿದರು.

By Suddi9

Leave a Reply

Your email address will not be published. Required fields are marked *