ಬಜ್ಪೆ: ತೊಕ್ಕೊಟ್ಟು, ಪಂಪ್ ವೆಲ್ ಪ್ರದೇಶದಲ್ಲಿ ಐದು ಸರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಬಜ್ಪೆಪೊಲೀಸರು ಬಂಧಿಸಿದ್ದಾರೆ.ಸುಲ್ತಾನ್ ಬತ್ತೇರಿ ನಿವಾಸಿ ಸುಬ್ರಹ್ಮಣ್ಯ(36), ತೊಕ್ಕೊಟ್ಟುವಿನ ಉಮೇಶ್ (48), ಆಡಂಕುದ್ರು ವಿನ ಮಣಿಕಂಠ(32) ಬಂಧಿತರು.

ಆರೋಪಿಗಳು ಟೆಂಪೋ ಬಳಸಿಕೊಂಡು ಹಿರಿಯ ನಾಗರೀಕರ ದರೋಡೆಗೆ ಯತ್ನಿಸುತ್ತಿರುವ ವೇಳೆ ಸೆರೆಯಾಗಿದ್ದಾರೆ. ಒಂಟಿಯಾಗಿರುವ ಮಹಿಳೆಯರನ್ನು ಕಂಡಲ್ಲಿ ಟಎಂಪೋ ನಿಲ್ಲಿಸಿ ದಾರಿ ಕೇಳುವಂತೆ ನಾಟಕವಾಡಿ ಸರ ಎಗರಿಸಿ ಪರಾರಿಯಾಗುತ್ತಿದ್ದರು. ಮುಲ್ಕಿ, ಕದ್ರಿ, ಬಂಟ್ವಾಳ ಮತ್ತು ಬಜಪೆ ಠಾಣೆಯಲ್ಲಿ ಎರಡು ಪ್ರಕರಣಗಳು ಆರೋಪಿಗಳ ಮೇಲಿದೆ. ಬಂಧಿತರಿಂದ 64 ಗ್ರಾಂ ಚಿನ್ನ, ಒಂದು ಸ್ಕೂಟರ್ ಮತ್ತು ಟೆಂಪೋ ಸೇರಿ ಒಟ್ಟು ಆರು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ಕಮೀಷನರ್ ಅವರ ನಿರ್ದೇಶನದಂತೆ ಕ್ರೈಂ ಡಿಸಿಪಿ ಡಾ.ಸಂಜೀವ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಟಿ.ಡಿ.ನಾಗರಾಜ್, ಎಸ್.ಐ ರಮೇಶ್ ಹಾನಾಪುರ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
