ಬಂಟ್ವಾಳ:ಇತ್ತೀಚೆಗೆ ನಡೆಯುತ್ತಿರುವ ಕೊಲೆ ಕೊಲೆಯತ್ನಗಳು ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ನಿರಂತರವಾಗಿ ಬೆನ್ನು ಬೆನ್ನಿಗೆ ಗ್ಯಾಂಗ್ವಾರ್ಗಳು ಜನರನ್ನು ಬೆಚ್ಚುಬೀಳಿಸುತ್ತಿದೆ.
ನಿನ್ನೆ ಮಾರಿಪಳ್ಳ ಬಳಿ ರೌಡಿ ಶೀಟ ರ್ವೋರ್ವನನ್ನು ಕಾರು ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಹಾಡುಹಗಲೇ ನಡೆದಿದ್ದು,ಪರಿಣಾಮ ಸ್ಥಳದಲ್ಲಿ ಕೆಲ ಹೊತ್ತುಗಳ ಕಾಲ ಆತಂಕದ ವಾತಾವರಣ ಉಂಟಾಯಿತು.ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.ಇಲ್ಲಿನ ನಿವಾಸಿ ಹನೀಫ್ ಯಾನೆ ಮಾದ ಹನೀಫ್ (38) ದುಷ್ಕರ್ಮಿಗಳಿಂದ ಇರಿತಕ್ಕೆ ಒಳಗಾದವನಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಡುಗಲೇ ಈ ಘಟನೆ ನಡೆದಿರುವುದರಿಂದ ಸ್ಥಳೀಯರು ಆತಂಕಕ್ಕೆ ಕಾರಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.
ಘಟನೆ ವಿವರ:ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಮನೆಯಿಂದ ಹೊರಟಿದ್ದ ಹನೀಫ್ ಯಾನೆ ಮಾದ ಹನೀಫ್ ಮಾರಿಪಳ್ಳದ ಅಂಗಡಿಯೊಂದರ ಮುಂದೆ ನಿಂತಿದ್ದ ಸಂದರ್ಭದಲ್ಲಿ ಹಠಾತ್ತನೆ ಕಾರು ಹಾಗೂ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಈತನ ಮೇಲೆ ಚೂರಿಯಿಂದ ಏಕಾಏಕಿಯಾಗಿ ಇರಿದು ಪರಾರಿಯಾಗಿದೆ. ಗಾಯಗೊಂಡ ಹನೀಫ್ ನನ್ನು ತಕ್ಷಣ ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.ಗಾಯಾಳು ಹನೀಫ್ ಮಾರಿಪಳ್ಳದ ರಿಕ್ಷಾ ಚಾಲಕ ರಿಫೈ, ನೂರುದ್ದೀನ್ ಹಾಗೂ ಅಹಿತಕರ ಘಟನೆಯ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣ ಸಹಿತ ಒಟ್ಟು ಮೂರು ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಹೆಸರು ರೌಡಿ ಶೀಟ್ ನಲ್ಲಿಯೂ ದಾಖಲಾಗಿತ್ತು. ಈತನ ಮೇಲೆ ಗೂಂಡಾ ಕಾಯಿದೆಯನ್ನು ಹಾಕಲು ಪೊಲೀಸರು ಸಿದ್ದತೆ ನಡೆಸಿದ್ದರಾದರೂ ಕಾರಣಾಂತರಗಳಿಂದ ಅದು ಜಾರಿಗೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಇದೀಗ ಹನೀಫ್ನನ್ನು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಚೂರಿಯಿಂದ ಇರಿದು ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ ಎಂಬುದನ್ನು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.ಈ ಕೃತ್ಯದಲ್ಲಿ ನಾಲ್ಕರಿಂದ ಐದು ಮಂದಿಭಾಗಿಯಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಹಲ್ಲೆ ನಡೆಸಲು ಉಪಯೋಗಿಸಿದ ಕಾರನ್ನು ಬಂಟ್ವಾಳದ ಗ್ಯಾರೇಜ್ ಒಂದರಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಕಾರನ್ನು ಬಂಟ್ವಾಳ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಹಳೆಯ ದ್ವೇಷವೇ?: ಇಲ್ಲಿ ನಡೆಯುವ ಗ್ಯಾಂಗ್ ವರ್ ಗಳಿಗೆ ಗಾಂಜ ವ್ಯವಹಾರವೇ ಪ್ರಮುಖ ಕಾರಣವಾಗಿರಬಹುದೇ ಎಂದು ಪೋಲೀಸರು ತಿಳಿಸಿದ್ದಾರೆ.
2012 ರಲ್ಲಿ ಇಲ್ಲಿ ನೂರುದ್ದಿನ್ ಎನ್ನುವ ವ್ಯಕ್ತಿಯನ್ನು ಸಂಜೆ ಕಡಿದು ಇದೇ ಗ್ಯಾಂಗ್ ಕೊಲೆ ಮಾಡಿತ್ತು. ನೂರುದ್ದೀನ್ ಇದೇ ಗುಂಪಿನ ನಾಯಕನಾಗಿದ್ದ ಈತ ಕೇರಳದಿಂದ ಗಾಂಜಗಳನ್ನು ತಂದು ಮಾರಟ ಮಾಡುತ್ತಿದ್ದ ಗಾಂಜಗಳನ್ನು ಇದೇ ಗುಂಪಿನ ಮೂಲಕ ಮಾರಾಟ ಮಾಡಿಸುತ್ತಿದ್ದ ಜೊತೆಗೆ ಪೋಲಿಸರೊಂದಿಗೆ ಅಷ್ಟೇ ಅನ್ಯೋನ್ಯವಾಗಿದ್ದಕೊಂಡು, ತಮ್ಮ ಸ್ನೇಹಿತರನ್ನು ಗಾಂಜ ಮಾರಾಟ ಮಾಡುವ ವೇಳೆ ಪೋಲೀಸರಿಗೆ ಮಾಹಿತಿ ನೀಡಿ ಅವರನ್ನು ಬಂದಿಸುತ್ತಿದ್ದ್, ಬಳಿಕ ಅತನೇ ಮುಂದೆ ನಿಂತು ಅರೋಪಿಗಳನ್ನು ಬಿಡುಗಡೆಮಾಡುತ್ತಿದ್ದ . ಈತನ ಒಳಮರ್ಮವನ್ನು ತಿಳಿದ ಇವನ ಸ್ನೇಹಿತರು ಒಟ್ಟಿಗೆ ಇದ್ದೇ ಈತನ ಕೊನೆಗಾಣಿಸುವುದಕ್ಕೆ ಮೂಹೂರ್ತ ರೆಡಿ ಮಾಡಿದರು. 2012 ರಂದು ಸಂಜೆ ಮಾರಿಪಳ್ಳದ ಅಂಗಡಿ ಬಾಗಿಲಲ್ಲಿ ಕೊಚ್ಚಿ ಕೊಲೆ ಮಾಡಿದರು.
ಅದೇ ಮುಂದುವರಿದು ಗಾಂಜಾ ವ್ಯವಹಾರಕ್ಕೆ ಸಂಬಂದಿಸಿದಂತೆ ಎರಡು ಗುಂಪುಗಳು ಹುಟ್ಟಿದವು ಜೂನ್ 21 – 2014 ರಂದು ಇದೇ ಗ್ಯಾಂಗಿನ ನೌಸಾದ್ ನನ್ನು ಮಾರಿಪಳ್ಳದ ಮಸೀದಿಯ ಬಳಿ ಸಂಜೆ ಕಾರಿನಲ್ಲಿ ಬಂದ ಸ್ನೇಹಿತ ಕಡಿದು ಕೊಲೆ ಮಾಡಿ ಪರಾರಿಯಾದರು. ಅ ಬಳಿಕ ಸ್ನೇಹಿತನ ಕೊಲೆಗೆ ಸೇಡು ತೀರಿಸಲು ಬೇಕಾಗಿ ನೌಶಾದ್ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದ್ ತೌಸೀಪ್ ಜೈಲಿನಲ್ಲಿರುವಾಗಲೇ ಈತನ ತಮ್ಮ ಬಡಪಾಯಿ ರಿಕ್ಷಾ ಚಾಲಕ ರಿಪಾಯಿನನ್ನು ಅಗಸ್ಟ್ 9-2014 ರಂದು ಪರಂಗಿಪೇಟೆಯಿಂದ ರಿಕ್ಷಾ ಬಾಡಿಗೆ ಮಾಡಿಕೊಂಡು ಇದೇ ಗ್ಯಾಂಗ್ ನೆತ್ತರಕೆರೆಯ ಗುಡ್ಡೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿತ್ತು.
ಈ ಕೊಲೆಗೆ ಪ್ರತೀಕಾರವಾಗಿ ಮತ್ತೆ ಮಾದ ಹನೀಪ್ ನ ಸ್ಕೆಚ್ ಹಾಕಿದ್ದಾರಾ ಅಥವಾ ಬೇರೆ ಏನಾದರೂ ಪೂರ್ವ ದ್ವೇಷವೇ ಎನ್ನುವುದು ತನಿಖೆಯ ಬಳಿಕ ತಿಳಿಬೇಕಷ್ಟೇ. ಮಾಹಿತಿಯ ಪ್ರಕಾರ ಪೋಲಿಸರು ಕೆಲವು ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡಸಸುತ್ತಿದಾರೆ ಎಂದು ತಿಳಿದು ಬಂದಿದೆ. ಅಂತೂ ಮುಂದಿನ ದಿನಗಳಲ್ಲಿ ಮತ್ತೆ ಗ್ಯಾಂಗ್ ವಾರಗಳು ಮುಂದುವರಿಯುವ ಬಗ್ಗೆ ಪೋಲೀಸರಿಗೆ ಈಗಾಗಲೇ ಮಾಹಿತಿ ಸಿಕ್ಕಿದ್ದು, ಪೋಲಿಸರು ತಲೆ ಕೆಡಿಸಿಕೊಂಡಿದ್ದಾರ
